Wednesday, July 15, 2026
Homeಕರಾವಳಿಉಡುಪಿನಿಮ್ಮಿಂದಲೇ ನಮ್ಮ ದೇವಸ್ಥಾನಗಳಿಗೆ ಮಣ್ಣು ಹೊರಿಸುತ್ತೇವೆ: ಎಸ್ ಡಿಪಿಐ ಅಧ್ಯಕ್ಷ ಮಜೀದ್ ಗೆ ಬಿಜೆಪಿ ಮುಖಂಡ...

ನಿಮ್ಮಿಂದಲೇ ನಮ್ಮ ದೇವಸ್ಥಾನಗಳಿಗೆ ಮಣ್ಣು ಹೊರಿಸುತ್ತೇವೆ: ಎಸ್ ಡಿಪಿಐ ಅಧ್ಯಕ್ಷ ಮಜೀದ್ ಗೆ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಎಚ್ಚರಿಕೆ

- Advertisement -
- Advertisement -

ಉಡುಪಿ: ಮಳಲಿ ಮಸೀದಿ ವಿವಾದ ಕುರಿತು ಎಸ್ ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ತಿರುಗೇಟು ಕೊಟ್ಟಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಸುವರ್ಣ, ಎಸ್ ಡಿಪಿಐ ತನ್ನ ಅಂತಿಮಯಾತ್ರೆಯ ಸಭಾ ಕಾರ್ಯಕ್ರಮ ಮಾಡಿದ್ದು, ಎಸ್ ಡಿಪಿಐ ಗೂಂಡಾಗಳು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ಹಿಂದುಗಳ ಬಗ್ಗೆ ಮಾತನಾಡುವ ಮೊದಲು ಎಚ್ಚರ ವಹಿಸಿ ಎಂದು ಎಚ್ಚರಿಕೆ ನೀಡಿರುವ ಯಶಪಾಲ್ ಸುವರ್ಣ, ಹಿಂದುಗಳು ಮನಸ್ಸು ಮಾಡಿದರೆ ನೀವೆಲ್ಲಾ ನಾಮ ಹಾಕಿಕೊಂಡು ಕೇಸರಿ ಶಾಲು ಧರಿಸಿ ಓಡಾಡಬೇಕಾಗುತ್ತದೆ ಎಂದಿದ್ದಾರೆ.

ನೀವು ಒಂದು ಹಿಡಿ ಮಣ್ಣು ಕೊಡುವುದಲ್ಲ, ನಿಮ್ಮಿಂದಲೇ ನಮ್ಮ ದೇವಸ್ಥಾನಗಳಿಗೆ ಮಣ್ಣು ಹೊರಿಸುತ್ತೇವೆ ಎಂದು ಹೇಳಿರುವ ಯಶಪಾಲ್ ಸುವರ್ಣ, ಈ ರೀತಿಯ ಹಾಸ್ಯಾಸ್ಪದ ಹೇಳಿಕೆ ಕೊಡುವುದನ್ನು ನಿಲ್ಲಿಸದಿದ್ದರೆ, ನಿಮ್ಮ ಸಮುದಾಯದಲ್ಲಿರುವ ಅಮಾಯಕ ಜನರು ಕೂಡ ಇದಕ್ಕೆ ಬೆಲೆ ತೆರಬೇಕಾಬಹುದು ಎಂದು ಹೇಳಿದ್ದಾರೆ.

- Advertisement -

Latest News

error: Content is protected !!