Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದ ಬಳಸಿ ಘೋಷಣೆ ಕೂಗಿದ ಎಸ್ ಡಿಪಿಐ ಕಾರ್ಯಕರ್ತರು

ಮಂಗಳೂರಿನಲ್ಲಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದ ಬಳಸಿ ಘೋಷಣೆ ಕೂಗಿದ ಎಸ್ ಡಿಪಿಐ ಕಾರ್ಯಕರ್ತರು

- Advertisement -
- Advertisement -

ಮಂಗಳೂರು: ಪೋಲಿಸರನ್ನು ನಾಯಿಗೆ ಹೋಲಿಕೆ ಎಸ್‌ಡಿಪಿಐ ಕಾರ್ಯಕರ್ತರು ಘೋಷಣೆ ಕೂಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಿನ್ನೆ ಮಂಗಳೂರು ಹೊರವಲಯದಲ್ಲಿರುವ ಅಡ್ಯಾರು ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐ ಸಮಾವೇಶಕ್ಕೆ ಬೈಕ್ ನಲ್ಲಿ ತೆರಳುವಾಗ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗಿದೆ.

ಹೆಲ್ಮೆಟ್ ಹಾಕದೇ ಬೈಕ್ ಸವಾರಿ ಮಾಡಿದ ಯುವಕರು ಈ ವೇಳೆ ಆರ್ ಎಸ್ಎಸ್ ವಿರುದ್ಧ ಕೂಡಾ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ.

ಯುವಕರು ಎಸ್ ಡಿಪಿಐ ಪಕ್ಷದ ಬಾವುಟ ಹಿಡಿದುಕೊಂಡು ಬೈಕ್ ನಲ್ಲಿ ಹೋಗುವ ವೇಳೆ ಘೋಷಣೆ ಕೂಗುವ ವೀಡಿಯೋ ಬಹಿರಂಗವಾಗಿದೆ.

- Advertisement -

Latest News

error: Content is protected !!