- Advertisement -
![]()
- Advertisement -
ಭೋಪಾಲ್: ಸಾಮಾನ್ಯವಾಗಿ ಮದುಮಗಳು ಮದುವೆ ಕಾರಿನಲ್ಲಿ ಬರುವುದು ರೂಢಿ. ಆದರೆ ಇಲ್ಲೊಬ್ಬಳು ವಧು ತನ್ನ ಮದುವೆಗೆ ತಾನೇ ಟ್ರ್ಯಾಕ್ಟರ್‌ನ್ನು ಚಲಾಯಿಸಿಕೊಂಡು ಮಂಟಪಕ್ಕೆ ಭರ್ಜರಿಯಾಗಿ ಪ್ರವೇಶ ನೀಡಿದ್ದಾಳೆ.
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಜಾವಾ ಗ್ರಾಮದಲ್ಲಿ ಮದುವೆ ನಡೆದಿದ್ದು, ವಧಉ ಭಾರತಿ ತಾಗ್ಗೆ ಕಪ್ಪು ಕನ್ನಡಕವನ್ನು ಧರಿಸಿ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಪಕ್ಕದಲ್ಲಿ ಕುಳಿತಿದ್ದರು. ಈ ರೀತಿಯಾಗಿ ವಧುವಿನ ಪ್ರವೇಶ ಅಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳಿಸಿತು.
ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಬದಲಾಗಿ ಏನನ್ನಾದರೂ ಮಾಡಲು ಬಯಸುತ್ತಿದ್ದೆ ಎಂದು ಭಾರತಿ ತಾಗ್ಗೆ ತಿಳಿಸಿದರು. ಇದೀಗ ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
- Advertisement -


