Tuesday, June 16, 2026
Homeಕರಾವಳಿಸುಳ್ಯ: ದೈವಸ್ಥಾನದ ಹುಂಡಿ ಹಣ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಕಳ್ಳ

ಸುಳ್ಯ: ದೈವಸ್ಥಾನದ ಹುಂಡಿ ಹಣ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಕಳ್ಳ

- Advertisement -
- Advertisement -

ಸುಳ್ಯ: ದೈವಸ್ಥಾನದ ಹುಂಡಿ ಹಣ ಕದಿಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಕಳ್ಳ ಸಿಕ್ಕಿ ಬಿದ್ದ ಘಟನೆ ಸುಳ್ಯದ ಜಯನಗರದ ಆದಿ ಮೊಗೆರ್ಕಳ ದೈವಸ್ಥಾನದಲ್ಲಿ ನಡೆದಿದೆ.ಜಯನಗರದ ಆಶ್ರಯ ಕಾಲೋನಿ ನಿವಾಸಿ ಜೀವನ್ ಸಿಕ್ಕಿ ಬಿದ್ದ ಕಳ್ಳ.

ಇಂದು ಬೆಳಗ್ಗೆ 11 ಗಂಟೆ ಸ್ಥಳೀಯರು ದೈವಸ್ಥಾನದಲ್ಲಿ ಪೂಜೆ ಸಲ್ಲಿಸುವುದಕ್ಕಾಗಿ ಬಂದಿದ್ದಾರೆ.ಈ ವೇಳೆ ದೈವಸ್ಥಾನದ ಅಡುಗೆ ಕೋಣೆಯಲ್ಲಿ ಏನೋ ಶಬ್ದ ಕೇಳಿ ಬಂದಿದೆ. ಹೋಗಿ ನೋಡಿದಾಗ ಕಳ್ಳ ಹುಂಡಿ ಒಡೆಯುತ್ತಿರೋದು ಕಂಡಿದೆ.ಕೂಡಲೇ ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಕರೆ ಮಾಡಿ ತಿಳಿಸಿದ್ದಾರೆ.ಅವರೆಲ್ಲಾ ಬಂದು ಆತನನ್ನು ಹಿಡಿದು ಸುಳ್ಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇನ್ನು ಈತ  ಈ ಹಿಂದೆಯೂ ಇದೇ ರೀತಿ ಕಳ್ಳತನಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಆಗ ಆತನಿಗೆ ಬುದ್ಧಿ ಹೇಳಿ ಕಳುಹಿಸಲಾಗಿತ್ತು.ಆದರೆ ಇದೀಗ ಮತ್ತೆ ಹಳೇ ಛಾಳಿ ಮುಂದುವರೆಸಿದ್ದಾನೆ ಎನ್ನಲಾಗಿದೆ,

- Advertisement -

Latest News

error: Content is protected !!