Friday, April 26, 2024
Homeಇತರಆಜಾನ್ ಮೈಕ್ ಗಡುವು ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ

ಆಜಾನ್ ಮೈಕ್ ಗಡುವು ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಆಜಾನ್ ಕುರಿತು ವಿವಾದಗಳು ಸೃಷ್ಟಿಯಾಗಿದ್ದು, ಸರ್ಕಾರ ಮಸೀದಿ ಮೈಕ್ ವಾರ್‌ ವಿಚಾರಕ್ಕೆ ನಾಂದಿ ಹಾಡಲು 15 ದಿನಗಳ ಗಡುವನ್ನು ನೀಡಿತ್ತು. ಆದರೆ ಸರ್ಕಾರ ನೀಡಿದ ಡೆಡ್ ಲೈನ್ ಇಂದೇ ಮುಗಿಯುತ್ತಿದ್ದು, ಮುಸ್ಲಿಂ ಮುಖಂಡರು ಡೆಡ್ ಲೈನ್ ವಿಸ್ತರಣೆಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಮೈಕ್ ಸಮರ ದೊಡ್ಡ ಸಮರವನ್ನೇ ಸಾರಿತು. ಆಜಾನ್ ಹಾಗು ಸುಪ್ರಭಾತದ ಜಿದ್ದಾಜಿದ್ದಿಯು ಶುರುವಾಗಿತ್ತು. ಕೊನೆಗೆ ಸರಕಾರವು ಆಜಾನ್ ವಿಚಾರವಾಗಿ 15 ದಿನಗಳ ಗಡುವನ್ನು ನೀಡಿ ಮೈಕ್ ಬಳಕೆಗೆ ಅನುಮತಿ ಪಡೆಯುವಂತೆ ಸೂಚಿಸಿತು. ಆದರೆ ಕೆಲ ಸ್ಟೇಷನ್ ಗಳಲ್ಲಿ ಇದರ ಕುರಿತು ಮಾಹಿತಿ ಆರಂಭದಲ್ಲಿ ಇರಲಿಲ್ಲ.

ಆಜಾನ್ ಅನುಮತಿ ಪ್ರಕ್ರಿಯೆಗೆ ಕೊಡಬೇಕಾದ ಫಾರ್ಮ್ ಅನ್ನು ಎರಡೆರಡು ಬಾರಿ ಬದಲಿಸಲಾಯಿತು. ಕೆಲ ಮಸೀದಿಯ ಮೌಲಿಗಳಿಗೆ ಮಾಹಿತಿ ಸಮಸ್ಯೆ ಇದಿದ್ದರಿಂದ ಇನ್ನೂ ಕೆಲವು ಮಸೀದಿಯವರು ಮಾಹಿತಿ ಪಡೆದಿಲ್ಲ. ಹೀಗಾಗಿ ಮುಸ್ಲಿಂ ಮುಖಂಡರು ಡೆಡ್ ಲೈನ್ ಮರುವಿಸ್ತರಣೆ ಮಾಡಬೇಕೆಂದು ಸರ್ಕಾರದ ಮೊರೆ ಹೋಗಿದ್ದಾರೆ. ಏಕಾಏಕಿ ಡೆಡ್‍ಲೈನ್‍ಗೆ ಟೈಂ ಇರುವಾಗಲೇ ಮತ್ತೆ ನೋಟಿಸ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. 

- Advertisement -
spot_img

Latest News

error: Content is protected !!