Sunday, June 28, 2026
Homeತಾಜಾ ಸುದ್ದಿಈ ಪ್ಲಾಸ್ಟಿಕ್‌ ಬಕೆಟ್‌ ಬೆಲೆ ಕೇಳಿ ಗ್ರಾಹಕರು ಗಾಬರಿ: ಭಾರೀ ವೈರಲ್‌ ಆಯ್ತು ಅಮೆಜಾನ್‌ ನಲ್ಲಿ...

ಈ ಪ್ಲಾಸ್ಟಿಕ್‌ ಬಕೆಟ್‌ ಬೆಲೆ ಕೇಳಿ ಗ್ರಾಹಕರು ಗಾಬರಿ: ಭಾರೀ ವೈರಲ್‌ ಆಯ್ತು ಅಮೆಜಾನ್‌ ನಲ್ಲಿ ಸೇಲ್‌ಗಿದ್ದ ಬಕೆಟ್ 

- Advertisement -
- Advertisement -

ಬೆಂಗಳೂರು: ಈಗ ಆನ್‌ಲೈನ್ ಶಾಪಿಂಗ್ ಹೆಚ್ಚಾದ ಮೇಲೆ ಜನರು ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವುದೇ ಕಡಿಮೆಯಾಗಿದೆ. ಆನ್‌ಲೈನ್‌ನಲ್ಲಿ ಯಾವ ಆಫರ್ ಇದೆ, ಏನೆಲ್ಲ ಆಯ್ಕೆಗಳಿವೆ ಎಂದು ನೋಡಲು ಸುಲಭವಾದ್ದರಿಂದ ಜನರು ಆನ್ ಲೈನ್‌ನಲ್ಲಿಯೇ ವಸ್ತುಗಳನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಕೆಲವು ದಿನಗಳ ಹಿಂದೆ ಆನ್‌ಲೈನ್‌ನಲ್ಲಿ ತೆಂಗಿನ ಚಿಪ್ಪಿಗೆ ಸಾವಿರಾರು ರೂ. ನಿಗದಿಯಾಗಿದ್ದು ಭಾರೀ ವೈರಲ್ ಆಗಿದೆ. ಇದೀಗ ಪ್ಲಾಸ್ಟಿಕ್ ಬಕೆಟ್‌ಗೆ ಅಮೆಜಾನ್‌ನಲ್ಲಿ 25,999 ರೂ. ಬೆಲೆ ಹಾಕಿರುವುದು ಭಾರೀ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಐಷಾರಾಮಿ ವಸ್ತುಗಳನ್ನು ಭಾರಿ ಮೊತ್ತಕ್ಕೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಪ್ಲಾಸ್ಟಿಕ್ ಬಕೆಟ್‌ಗೆ ಇಷ್ಟೊಂದು ದುಬಾರಿ ಬೆಲೆ ಇರುತ್ತದೆ ಎಂದು ನಾವು ಯಾರೂ ಊಹಿಸಿರಲಿಲ್ಲ. ಹೌದು, ಟ್ವಿಟರ್ ಬಳಕೆದಾರರು ಇತ್ತೀಚೆಗೆ ಅಮೆಜಾನ್‌ನಲ್ಲಿ ಹಾಕಲಾದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಕೆಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಬಕೆಟ್‌ಗೆ 25,999 ರೂ. ಇದೆ. ಅಂದಹಾಗೆ, ಈ ಬಕೆಟ್‌ಗೆ ನಿಜವಾದ ಬೆಲೆ 35,900 ರೂ. ಆದರೆ, ಶೇ. 28ರಷ್ಟು ರಿಯಾಯಿತಿ ನೀಡಿ 25,999 ರೂ.ಗೆ ಈ ಬಕೆಟ್ ಮಾರಲಾಗುತ್ತಿದೆ! ಇದು ತಮಾಷೆ ಅಲ್ಲ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ಈ ಬಕೆಟ್ ಈಗ ಔಟ್ ಆಫ್ ಸ್ಟಾಕ್ ಆಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಯಾರು ಬಕೆಟ್ ಖರೀದಿಸುತ್ತಾರೆ ಅಂತ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!