- Advertisement -
- Advertisement -
ಮೂಡಬಿದಿರೆ: ಶಿರ್ತಾಡಿ ಗ್ರಾಮದ ಜಾಲಿಗುಡ್ಡೆ ಸತ್ಯನಾರಾಯಣ ದೇವಸ್ಥಾನದ ಬಳಿಯ ನಿವಾಸಿ ಗೀತಾ (39) ಹಾಗೂ ಅವರ ಏಳು ವರ್ಷದ ಮಗ ಯಶಸ್ ನಾಪತ್ತೆಯಾಗಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆವಾರ್ತೆ ಕೆಲಸ ಮಾಡಿಕೊಂಡಿದ್ದ ಗೀತಾ ಅವರು, ಅಕ್ಟೋಬರ್ 6ರಂದು ಮಧ್ಯಾಹ್ನ ಮಗ ಯಶಸ್ನನ್ನು ಶಾಲೆಯಿಂದ ಕರೆದುಕೊಂಡು ಮೂಡುಬಿದಿರೆ ಪೇಟೆಗೆ ಹೋಗಿ ಬರುವುದಾಗಿ ನೆರೆಮನೆಯವರಿಗೆ ತಿಳಿಸಿ ತೆರಳಿದ್ದರು. ಆದರೆ ಬಳಿಕ ಮನೆಗೆ ಹಿಂತಿರುಗದೆ ಮಗನೊಂದಿಗೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
- Advertisement -


