Sunday, June 7, 2026
Homeತಾಜಾ ಸುದ್ದಿಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯ ತ್ಯಾಗರಾಜನಗರದ ಮಹಿಳೆಯೊಬ್ಬರು ಬಿ.ಸಿ.ರೋಡ್ ಗೂಡಿನಬಳಿ ಎಂಬಲ್ಲಿರುವ ನೇತ್ರಾವತಿ ಹಳೇ ಸೇತುವೆಯಿಂದ ನಿನ್ನೆ ಮಧ್ಯಾಹ್ನ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ ಭಟ್ (67) ಮೃತಪಟ್ಟವರು.

ಪತಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಯಾವುದೋ ವೈಯಕ್ತಿಕ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ನೀರಿಗೆ ಹಾರಿದ ಸಂದರ್ಭ ಸ್ಥಳೀಯ ಈಜುಪಟುಗಳು ಅವರನ್ನು ರಕ್ಷಿಸಲು ಯತ್ನಿಸಿದರೂ  ಸಾಧ್ಯವಾಗಲಿಲ್ಲ.  ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕೊಂಡೊಯ್ದಾಗ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!