Friday, June 5, 2026
Homeತಾಜಾ ಸುದ್ದಿತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡ ಯುವಕ : ಹತ್ತಾರು ಹುಡುಗಿಯರ ಬಾಳು ಹಾಳು ಮಾಡಿದಾತ...

ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡ ಯುವಕ : ಹತ್ತಾರು ಹುಡುಗಿಯರ ಬಾಳು ಹಾಳು ಮಾಡಿದಾತ ಕೊನೆಗೂ ಅರೆಸ್ಟ್

- Advertisement -
- Advertisement -

ಮೈಸೂರು: ತನ್ನ ಅಂದವನ್ನೇ ಬಂಡವಾಳ ಮಾಡಿಕೊಂಡು ಪ್ರೀತಿ ಹೆಸರಲ್ಲಿ ಹತ್ತಾರು ಯುವತಿಯರ ಬಾಳು ಹಾಳು ಮಾಡಿದಾತ ಕೊನೆಗೂ ಅಂದರ್ ಆಗಿದ್ದಾನೆ.
ಅಂದ್ಹಾಗೆ ಈ ಕಾಮ ಪಿಶಾಚಿಯ ಹೆಸರು ಹೆಸರು ಶಿವಪ್ರಕಾಶ್ ಬಿ.ಜಿ., ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದವ. ನೋಡೋಕೆ ಹ್ಯಾಂಡ್ಸಮ್ ಆಗಿದ್ದು, ಇದನ್ನೇ ಬಡವಾಳ ಮಾಡಿಕೊಂಡ ಈತ ಬಣ್ಣಬಣ್ಣದ ಮಾತುಗಳನ್ನಾಡುತ್ತಾ ಯುವತಿಯರಿಗೆ ಫೇಸ್ಬುಕ್, ಗೂಗಲ್ ಮೀಟ್ ಮೂಲಕ ಗಾಳ ಹಾಕುತ್ತಿದ್ದ. ಅವರಿಗೆ ತನ್ನ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ. ಹಲವು ಯುವತಿಯರ ಜೊತೆ ಪ್ರೀತಿ ನಾಟಕವಾಗಿ, ಏಕಾಂತದಲ್ಲಿರೋ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕ, ಹಣಕ್ಕಾಗಿ ಪೀಡಿಸುತ್ತಿದ್ದ. ಮರ್ಯಾದೆಗೆ ಅಂಜಿ ಅದೆಷ್ಟೋ ಯುವತಿಯರು ಹಣ ಕೊಟ್ಟು ಇವನ ಕಾಟ ತಪ್ಪಿದರೆ ಸಾಕಪ್ಪ ಎಂದು ನಲುಗಿದ್ದಾರಂತೆ. ಆದರೆ, ಈತನಿಂದ ಅನ್ಯಾಯಕ್ಕೊಳಗಾದ ಮೈಸೂರಿನ ಯುವತಿಯೊಬ್ಬಳು ಶಿವಪ್ರಕಾಶ್ನ ಕರಾಳ ಮುಖವನ್ನ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಮೈಸೂರು ಮೂಲದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ಪ್ರೀತಿಯ ನಾಟಕ‌ವಾಡಿದ್ದ ಶಿವಪ್ರಕಾಶ್, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾ 20 ಲಕ್ಷ ಹಣ ಪೀಕಿದ್ದ. ನೊಂದ ಯುವತಿ ಮೈಸೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ನೋಡಿದರೇ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಯುವತಿಯರ ಜೊತೆ ಅಶ್ಲೀಲ ಚಾಟಿಂಗ್, ಬೆತ್ತಲೆ ದೃಶ್ಯಗಳು ಮೊಬೈಲ್ನಲ್ಲಿ ಪತ್ತೆಯಾಗಿವೆ.

- Advertisement -

Latest News

error: Content is protected !!