Saturday, June 6, 2026
Homeಕರಾವಳಿಉಡುಪಿಉಡುಪಿ: ಅಸಹಾಯಕ ಮಹಿಳೆಯನ್ನು ರಕ್ಷಿಸಿ ಮನೆಯವರಿಗೆ ಹಸ್ತಾಂತರ

ಉಡುಪಿ: ಅಸಹಾಯಕ ಮಹಿಳೆಯನ್ನು ರಕ್ಷಿಸಿ ಮನೆಯವರಿಗೆ ಹಸ್ತಾಂತರ

- Advertisement -
- Advertisement -

ಉಡುಪಿ: ಉಡುಪಿ ತಾಲೂಕಿನ ಅಲೆವೂರು ಗುಡ್ಡೆಯಂಗಡಿಯಲ್ಲಿ ದಿಕ್ಕು ತಪ್ಪಿ ಬಂದಿದ್ದ ಅಪರಿಚಿತ ಮಹಿಳೆಯೊಬ್ಬರು, ತಮ್ಮ ಮನೆಯೆಂದು ಭಾವಿಸಿ ಬೇರೆಯವರ ಮನೆ ಸೇರಿಕೊಂಡಿದ್ದರು.

ಮಹಿಳೆಯ  ಅಸಹಾಯಕತೆ ತಿಳಿದು ಸಮಾಜಸೇವಕ ನಿತ್ಯಾನಂದ ಒಳಕಾಡು ಮಹಿಳೆಯನ್ನು ಮಹಿಳಾ ಠಾಣಾ ಪೊಲೀಸರ ಮೂಲಕ ರಕ್ಷಿಸಿದ್ದಾರೆ. ಬಳಿಕ ಮಹಿಳೆ ಮಂಚಿಕೋಡಿಯ ನಿವಾಸಿ ಎಂದು ತಿಳಿದು ಬಂದಿದೆ.

ಆ ಬಳಿಕ ಪತ್ನಿಯ ಹುಡುಕಾಟದಲ್ಲಿದ್ದ ಪತಿಗೆ ಹಸ್ತಾಂತರ ಮಾಡಲಾಯಿತು. ಮಹಿಳೆ ಮರೆವು ಕಾಯಿಲೆಯಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ. ಕಾರ್ಯಚರಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಜಲೇಶ್ ಶೆಟ್ಟಿ ಸಹಕರಿಸಿದ್ದಾರೆ.

- Advertisement -

Latest News

error: Content is protected !!