Sunday, June 14, 2026
Homeಕರಾವಳಿಮಂಗಳೂರಿನಲ್ಲಿ ಬಡ ಕುಟುಂಬದ ಮೇಲೆ ದಂಪತಿಯಿಂದ ಹಲ್ಲೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

ಮಂಗಳೂರಿನಲ್ಲಿ ಬಡ ಕುಟುಂಬದ ಮೇಲೆ ದಂಪತಿಯಿಂದ ಹಲ್ಲೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರು: ಅತ್ತಾವರದ ಬಳಿ ದಂಪತಿ ಹಾಗೂ ಮಗುವಿನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಶ್ವನಾಥ್ ಮತ್ತು ಮಧುಸೂದನ್ ಬಂಧಿತರು.

ಅತ್ತಾವರದ ಅಂಬಿಕಾ ಮ್ಯಾನ್ಶನ್ ಅಪಾರ್ಟ್‌ಮೆಂಟ್‌ ಬಳಿ ಕಸ ಹಾಕುವ ವಿಷಯಕ್ಕೆ ಸಂಬಂಧಿಸಿ ಮೇ 4ರಂದು ಬಿಪುಲ್ ಕುಮಾರ್ ಎಂಬುವವರ ಮೇಲೆ, ಬಿಶ್ವನಾಥ್, ಮಧುಸೂದನ್, ಅಮೃತಾ, ರಾಜೇಶ್, ನೀರಜ್ ಎಂಬುವವರು ಹಲ್ಲೆ ನಡೆಸಿದ್ದಾರೆ

ಬಿಶ್ವನಾಥ ಮತ್ತು ಅಮೃತಾ ದಂಪತಿ ಸೇರಿ, ಹೊರಗಿನಿಂದ ಜನರನ್ನು ಕರೆಸಿ ಬಡ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಬಿಪುಲ್‌ಕುಮಾರ್ ದಂಪತಿ ಮತ್ತು ಅವರ 8 ವರ್ಷದ ಮಗುವಿನ ಮೇಲೆ ಕೂಡ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಇತರ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ

- Advertisement -

Latest News

error: Content is protected !!