Thursday, June 4, 2026
Homeತಾಜಾ ಸುದ್ದಿಪಾನ್‌ ಮಸಾಲ ಜಾಹೀರಾತು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್

ಪಾನ್‌ ಮಸಾಲ ಜಾಹೀರಾತು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್

- Advertisement -
- Advertisement -

ಕೆಜಿಎಫ್ ಚಿತ್ರದ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟ ಯಶ್ ಇದೀಗ ಜಾಹೀರಾತು ಕಂಪನಿಗಳಿಂದ ಭರ್ಜರಿ ಆಫರ್ ಕೇಳಿಬರುತ್ತಿವೆ. ಇದೀಗ ಯಶ್‌ಗೆ ಪಾನ್ ಮಸಲಾ ಸಂಸ್ಥೆ ಬಹುಕೋಟಿ ಆಫರ್ ನೀಡಿರುವುದು ವರದಿಯಾಗಿದೆ. ಆದರೆ ಯಶ್ ಈ ಜಾಹೀರಾತಲ್ಲಿ ನಟಿಸಲ್ಲ ಎಂದು ಆಫರ್ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.


ಪಾನ್ ಮಸಲಾ ಅಂಥ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಅದರ ಸೇವನೆ ಜೀವಕ್ಕೆ ಅಪಾಯ ಉಂಟುಮಾಡುತ್ತದೆ ಎಂಬುವುದನ್ನು ತಿಳಿಸಿದ್ದಾರೆ. ಇನ್ನು, ಕೆಲ ದಿನಗಳ ಹಿಂದೆಯಷ್ಟೇ ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ಪಾನ್ ಮಸಲಾ ಜಾಹೀರಾತನ್ನು ನಿರಾಕರಿಸಿದ್ದರು.


ಈ ಹಿಂದೆ ಅಂದರೆ 2021ರಲ್ಲಿ ಅಮಿತ್ ಬಚ್ಚನ್ ಕೂಡ ಪಾನ್ ಮಸಲಾ ಜಾಹೀರಾತಿನಿಂದ ಹೊರ ಬಂದಿದ್ದರು. ಉಳಿದಂತೆ ಕೆಲ ಸಮಯದ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪಾನ್ ಮಸಲಾ ಜಾಹೀರಾತಿನಲ್ಲಿ ನಟಿಸಿ ಭಾರೀ ಟೀಕೆಗೆ ಗುರಿಯಾಗಿದ್ದರು.

- Advertisement -

Latest News

error: Content is protected !!