Wednesday, June 3, 2026
HomeUncategorizedಪುತ್ತೂರು: ಸುಳ್ಯಪದವಿನ‌ ಕನ್ನಡ್ಕದಲ್ಲಿ ಆಕಸ್ಮಿಕವಾಗಿ ಕಾಲು‌ ಜಾರಿ‌ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

ಪುತ್ತೂರು: ಸುಳ್ಯಪದವಿನ‌ ಕನ್ನಡ್ಕದಲ್ಲಿ ಆಕಸ್ಮಿಕವಾಗಿ ಕಾಲು‌ ಜಾರಿ‌ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

- Advertisement -
- Advertisement -

ಪುತ್ತೂರು:  ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ನಡೆದಿದೆ.

ಪಡುವನ್ನೂರು ಗ್ರಾಮದ ಕೆಳಗಿನ ಕನ್ನಡ್ಕ ನಿವಾಸಿ ಧನುಷ್ (21) ಮೃತ ಯುವಕ. ಈತ ಪುತ್ತೂರು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ.

ಧನುಷ್ ಸುಳ್ಯ ಪದವು ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಇತ್ತೀಚಿಗೆ ನಡೆದ ಜಾಗರಣ ವೇದಿಕೆಯ ನೂತನ ಸಮಿತಿಯಲ್ಲಿ ಯುವವಾಹಿನಿ ಸಂಘಟನೆಯ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು.

ನಿನ್ನೆ ರಾತ್ರಿ ಒತ್ತೆಕೋಲ ನಡೆಯುತ್ತಿದ್ದಲ್ಲಿಗೆ  ಹೋಗಿ ಮನೆಗೆ ಹಿಂದಿರುಗುತ್ತಿರುವಾಗ ಮನೆಯ ಸಮೀಪವಿರುವ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!