Monday, June 8, 2026
Homeತಾಜಾ ಸುದ್ದಿರಾಜ್ಯದಲ್ಲಿ ಗಲಾಟೆ, ಅಶಾಂತಿ ಪರ ನಮ್ಮ ಸರಕಾರ ನಿಲ್ಲುವುದಿಲ್ಲ- ಸಮಾಜ ವಿರೋಧಿ ಕೆಲಸ ಮಾಡುವಂತವರ ವಿರುದ್ಧ...

ರಾಜ್ಯದಲ್ಲಿ ಗಲಾಟೆ, ಅಶಾಂತಿ ಪರ ನಮ್ಮ ಸರಕಾರ ನಿಲ್ಲುವುದಿಲ್ಲ- ಸಮಾಜ ವಿರೋಧಿ ಕೆಲಸ ಮಾಡುವಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ: ಡಾ. ಅಶ್ವತ್ಥ ನಾರಾಯಣ

- Advertisement -
- Advertisement -

ಬೆಂಗಳೂರು: ಅನ್ಯ ಧರ್ಮೀಯರಿಗೆ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಗಲಾಟೆ ಅಶಾಂತಿ ಪರ ನಮ್ಮ ಸರಕಾರ ನಿಲ್ಲುವುದಿಲ್ಲ. ಸಮಾಜ ವಿರೋಧಿ ಕೆಲಸ ಮಾಡುವಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ನಾವು ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ ಎಂದರು.

ಇನ್ನು ಯಾರೋ ಕೆಲವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಅನ್ಯ ಧರ್ಮೀಯರಿಗೆ ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

- Advertisement -

Latest News

error: Content is protected !!