ಬೆಂಗಳೂರು: ಪ್ರತಿನಿತ್ಯ ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಮಾಗಡಿ ರಸ್ತೆಯ ಆಂಧ್ರಹಳ್ಳಿಯಲ್ಲಿ ನಡೆದಿದೆ.
ಉಮೇಶ (52) ಕೊಲೆಯಾದ ವ್ಯಕ್ತಿಯಾಗಿದ್ದು, ವರಲಕ್ಷ್ಮಿ ಕೊಲೆ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ.
ಆತನು ದಿನನಿತ್ಯ ಮನೆಗೆ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದು, ನೆನ್ನೆ ರಾತ್ರಿ ಕೂಡ ಪತ್ನಿ ಕಾಲು ತಾಕಿತು ಎನ್ನುವ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾನೆ. ಇಬ್ಬರು ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕುಡಿದು ಜಗಳವಾಡುತ್ತೀಯಾ ಎಂದು ಆರೋಪಿ ವರಲಕ್ಷಿ ಪ್ರಶ್ನಿಸಿದ್ದಾಳೆ. ನೆನ್ನೆಯ ಜಗಳ ಇಂದು ಮುಂಜಾನೆ ಕೂಡ ಮುಂದುವರೆದಿದ್ದು, ಉಮೇಶ್ ಪತ್ನಿಗೆ ಹಲ್ಲೆ ಮಾಡಿದ್ದಾನೆ. ಈ ಹಿನ್ನಲೆ ಸಿಟ್ಟಿಗೆದ್ದ ಪತ್ನಿ ಮಾರಕಾಸ್ತ್ರದಿಂದ ಉಮೇಶ್ ತಲೆಗೆ ಹೊಡೆದಿದ್ದಾಳೆ.
ಗಂಭೀರ ಗಾಯಗೊಂಡಿದ್ದ ಉಮೇಶ್ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಮೇಶ್ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಸದ್ಯ ಪತಿಯನ್ನು ಕೊಂದ ಆರೋಪದ ಮೇಲೆ ಪತ್ನಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.


