Saturday, June 6, 2026
Homeಕರಾವಳಿಸಾಲಬಾಧೆಗೆ ಹೆದರಿ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ

ಸಾಲಬಾಧೆಗೆ ಹೆದರಿ ಸಮುದ್ರಕ್ಕೆ ಹಾರಿ ಯುವಕ ಆತ್ಮಹತ್ಯೆ

- Advertisement -
- Advertisement -

ಮಂಗಳೂರು ಸಾಲಬಾಧೆಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಲ್ಲಮ್ಮಾರ್ ಬೀಚಿನಲ್ಲಿ ನಡೆದಿದೆ.

ಸುರತ್ಕಲ್ ಆಶ್ರಯ ಕಾಲನಿ 3ನೇ ಬ್ಲಾಕ್ ನಿವಾಸಿ ಕರ್ನಲ್ ಡಿಸೋಜಾ ಅವರ ಪುತ್ರ ಕ್ಯಾಂಡ್ರಿಕ್ ಲೋರೆನ್ಸ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. “ಆತ್ಮಹತ್ಯೆಗೆ ನಾನೇ ಕಾರಣ. ಸಾಲ ಹೆಚ್ಚಾಗಿರುವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!