Sunday, June 29, 2025
Homeಕರಾವಳಿಮಂಗಳೂರುನಿಯಮ ಮೀರಿ ಮೈಕ್ ಬಳಸುವ ಕೇಂದ್ರಗಳಿಗೆ ಮಂಗಳೂರು ‌ಕಮಿಷನರ್ ನೋಟೀಸ್!

ನಿಯಮ ಮೀರಿ ಮೈಕ್ ಬಳಸುವ ಕೇಂದ್ರಗಳಿಗೆ ಮಂಗಳೂರು ‌ಕಮಿಷನರ್ ನೋಟೀಸ್!

spot_img
- Advertisement -
- Advertisement -

ಮಂಗಳೂರು: ಮಸೀದಿಗಳಲ್ಲಿ ಮೈಕ್ ಬಳಕೆ ವಿಚಾರ ಡಿಜಿಪಿ ಸುತ್ತೋಲೆ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಧ್ವನಿವರ್ಧಕ ಬಳಸುವ ಕೇಂದ್ರಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಮಂಗಳೂರು ‌ಕಮಿಷನರ್ ಶಶಿಕುಮಾರ್ ಆದೇಶದ ಹಿನ್ನೆಲೆ ಎಚ್ಚರಿಕೆ ನೋಟೀಸ್ ನೀಡಲಾಗಿದ್ದು, ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳಿಂದ ನೋಟೀಸ್ ಕಳುಹಿಸಲಾಗಿದೆ. ದೇವಸ್ಥಾನ, ‌ಮಸೀದಿ, ಶಿಕ್ಷಣ ಸಂಸ್ಥೆ, ಚರ್ಚ್, ಕೈಗಾರಿಕಾ ಸ್ಥಳ, ಮಾಲ್ ಗಳು, ಮದುವೆ ಹಾಲ್ ಗಳು ಸೇರಿ ಒಟ್ಟು 1001 ಧ್ವನಿವರ್ಧಕ ಬಳಸುವ ಕೇಂದ್ರಗಳಿಗೆ ನೋಟೀಸ್ ನೀಡಲಾಗಿದೆ. 1986ರ ನಿಯಮದಡಿ ಹೆಚ್ಚಿನ ಶಬ್ದ ಬಳಸದಂತೆ ಹಾಗೂ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಧ್ವನಿವರ್ಧಕ ಬಳಕೆಗಳ ವಿಪರೀತಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧಾರ ಮಾಡಿದ್ದು, ಅದರಂತೆ ಮಂಗಳೂರು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಹೊರಡಿಸುವ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಬ್ದ ಮಾಲಿನ್ಯ ಆಕ್ಟ್ 1986ರಡಿಯಲ್ಲಿ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದೆಂದು ನಿರ್ದೇಶಿಸಲಾಗಿದೆ. ಈ ನಿಯಮವನ್ನು ಶಬ್ದ ಮಾಲಿನ್ಯ ಆಕ್ಟ್ 1986 ರಡಿಯಲ್ಲಿ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. 357 ದೇವಸ್ಥಾನ, 168 ಮಸೀದಿ, 95 ಚರ್ಚ್ ಹಾಗೂ 106  ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು, 98ಮನರಂಜನಾ ಸ್ಥಳಗಳು,68 ಮದುವೆ ಹಾಲ್‌ಗಳು ಮತ್ತು ಕಾರ್ಯಕ್ರಮ ಸ್ಥಳಗಳು, 49 ಇತರ ಸಾರ್ವಜನಿಕ ಸ್ಥಳಗಳು ಸೇರಿದಂತೆ 1001 ಸ್ಥಳಗಳನ್ನು ಗುರುತಿಸಿ ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!