Friday, May 17, 2024
Homeತಾಜಾ ಸುದ್ದಿಜೆಜೆ ನಗರ ಚಂದ್ರು ಕೊಲೆ ಪ್ರಕರಣ: ಯೂಟರ್ನ್ ಹೊಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಜೆಜೆ ನಗರ ಚಂದ್ರು ಕೊಲೆ ಪ್ರಕರಣ: ಯೂಟರ್ನ್ ಹೊಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

spot_img
- Advertisement -
- Advertisement -

ಬೆಂಗಳೂರು: ಜೆಜೆ ನಗರ ಚಂದ್ರು ಕೊಲೆ ಪ್ರಕರಣ ಸಂಬಂಧ ಗೊಂದಲ ಸೃಷ್ಟಿಯಾಗಿತ್ತು.. ಅಷ್ಟಕ್ಕೂ ಗೊಂದಲಕ್ಕೆ ಕಾರಣವಾಗಿದ್ದು ಗೃಹ ಮಂತ್ರಿಗಳ ಹೇಳಿಕೆ.. ಹೌದು ಇಂದು ಈ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಾನು ಪೊಲೀಸರಿಂದ ಮಾಹಿತಿ ತರಿಸಿಕೊಂಡಿದ್ದೇನೆ. ಜೆಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಭಾಷೆಗಾಗಿ ನಡೆದ ಕೊಲೆ. ಇದು ಅಮಾನವೀಯ ಕೊಲೆ. ಇದನ್ನ ನಾವು ಖಂಡಿಸುತ್ತೇವೆ. ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುತ್ತೇವೆ ಎಂದಿದ್ರು. ಇದರ ಬೆನ್ನಲ್ಲೆ ಸಿಟಿ ರವಿ ಕೂಡಾ ಭಾಷೆಗಾಗಿ ಕೊಲೆಯಾಗಿದೆ ಅಂತ ಹೇಳಿದ್ದಾರೆ.. ತದನಂತರ ಮಾಧ್ಯಮಗಳಲ್ಲಿ ಪ್ರಕರಣದ ಸತ್ಯಾಸತ್ಯತೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿ ಬೈಕ್ ಗಳ ನಡುವೆ ಡಿಕ್ಕಿಯಾಗಿದ್ದ ಜಗಳ ತಾರಕ್ಕಕ್ಕೇರಿ ಕೊಲೆಯಾಗಿದೆ ಎಂದಿದ್ರು..

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತಿದ್ದಂತೆ ನಗರ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ನನಗೆ ಮಾಹಿತಿ ಕೊರತೆ ಇತ್ತು. ಮಾಧ್ಯಮದವರು ಪ್ರಶ್ನೆ ಕೇಳಿದ ತಕ್ಷಣ ನಾನು ಈ ರೀತಿ ಹೇಳಿಬಿಟ್ಟೆ. ನನ್ನಿಂದ ತಪ್ಪಾಗಿದೆ ಎಂದು ಕ್ಷಮೆಯಾಚನೆ ಮಾಡಿದ್ರು..

ಎರಡು ದಿನದ ಹಿಂದೆಯಷ್ಟೆ ಛಲವಾದಿ ಪಾಳ್ಯದ ನಿವಾಸಿಯಾಗಿರೋ ಚಂದ್ರು ತನ್ನ ಸ್ನೇಹಿತ ಸೈಮನ್ ಬರ್ತಡೆಗೆ ಜೆಜೆನಗರ ಕ್ಕೆ ಹೋಗಿದ್ರು.. ಹೋಟೆಲ್ ನಿಂದ ವಾಪಸ್ ಆಗುವಾಗ ಶಾಹಿದ್ ಎಂಬಾತನ ಬೈಕ್ ಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಶಾಹಿದ್, ಸೈಮನ್ ಚಂದ್ರು ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು.. ಕೂಡಲೆ ತನ್ನ ಬಳಿಯಿದ್ದ ಡ್ರಾಗರ್ ತೆಗೆದು ಚಂದ್ರು ತೊಡೆಗೆ ಬಲವಾಗಿ ಇರಿದಿದ್ದ ಶಾಹಿದ್.. ಜೊತೆಗೆ ಏರಿಯಾದ ಮತ್ತೊಬ್ಬ ಶಾಹಿದ್ ಹಾಗೂ ಜುನೈಲ್ ತಲವಾರ್ ನಿಂದ ಹಲ್ಲೆ ಮಾಡಿದ್ದಾರೆ.. ತೀವ್ರ ರಕ್ತಸ್ರಾವವಾಗಿ ಚಂದ್ರು ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ

- Advertisement -
spot_img

Latest News

error: Content is protected !!