Wednesday, June 24, 2026
Homeಕರಾವಳಿಉಡುಪಿಉಡುಪಿ: ಗೋಕಳ್ಳರಿಗೆ ಸಮುದಾಯವೇ ಬಹಿಷ್ಕಾರ ಹಾಕಲಿ: ದನ ಕದ್ದೊಯ್ದ ಕೃತ್ಯಕ್ಕೆ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ

ಉಡುಪಿ: ಗೋಕಳ್ಳರಿಗೆ ಸಮುದಾಯವೇ ಬಹಿಷ್ಕಾರ ಹಾಕಲಿ: ದನ ಕದ್ದೊಯ್ದ ಕೃತ್ಯಕ್ಕೆ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ

- Advertisement -
- Advertisement -

ಉಡುಪಿ ; ಕಾರ್ಕಳದಲ್ಲಿ ಗೋಕಳ್ಳರ ಅಟ್ಟಹಾಸ ಮಿತಿ ಮೀರಿದೆ. ಕೃಷಿಕರಿಗೆ ತಮ್ಮ ಗೋವುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮೂರು ದಿನಗಳ ಹಿಂದೆ ಇಲ್ಲಿ ಐಷಾರಾಮಿ‌ ಕಾರಲ್ಲೇ ದನ ಕದ್ದೊಯ್ದ ಕೃತ್ಯ ನಡೆದಿತ್ತು. ಇದೀಗ ಮೌನ ಮುರಿದಿರುವ ಜಿಲ್ಲಾ ಮುಸ್ಲಿಂ ಒಕ್ಕೂಟ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲೆಯ ಕಾರ್ಕಳ ಭಾಗದಲ್ಲಿ ಕೃಷಿಯೇ ಮುಖ್ಯ ಕಸುಬು.ಕೃಷಿಯ ಜೊತೆ ಜೊತೆಗೆ ಹೈನುಗಾರಿಕೆ ನಂಬಿ ಅನೇಕ ಕುಟುಂಬಗಳು ಜೀವನ‌ ನಡೆಸುತ್ತಿವೆ. ಆದರೆ ಕಾರ್ಕಳದ ಹಲವು ಗ್ರಾಮದಲ್ಲಿ ತಾವು ಸಾಕಿ ಸಲುಹಿದ ಗೋವುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.ತಮ್ಮ ಹಟ್ಟಿಯನ್ನು ಚಿನ್ನದ ಪೆಟ್ಟಿಗೆಯಂತೆ ಕಾಯುವ ಪರಿಸ್ಥಿತಿ ಬಂದೊದಗಿದೆ.ಮೊನ್ನೆ ಐಷಾರಾಮಿ ಕಾರಲ್ಲೇ ಗೋಕಳವು ಮಾಡಿದ ಕೃತ್ಯವಂತೂ ಹೇಯ! ಜಿಲ್ಲಾ ಮುಸ್ಲಿಂ ಒಕ್ಕೂಟ ಈ ಕೃತ್ಯವನ್ನು ಖಂಡಿಸಿದ್ದು ,ಆರೋಪಿಗಳನ್ನು ಬಂಧಿಸಿ ಶಿಕ್ಷಿಸುವ ಮೂಲಕ ಕಳ್ಳರಿಗೆ ಸೂಕ್ತ ಪಾಠ ಕಲಿಸಬೇಕು ಎಂದು ಹೇಳಿದೆ. ಗೋ ಕಳ್ಳತನ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಕೋಮು‌ ಸಾಮರಸ್ಯವೂ ಕದಡುತ್ತಿದೆ. ಯಾರೋ ಒಂದಿಬ್ಬರು ಮಾಡುವ ಕೃತ್ಯಕ್ಕೆ ಇಡೀ ಸಮುದಾಯ ಬೆಲೆ ತೆರುವಂತಾಗಿದೆ. ಹೀಗಾಗಿ ಮುಸ್ಲಿಂ ಧರ್ಮಗುರುಗಳು ಮತ್ತು ಜನಪ್ರತಿನಿಧಿಗಳು ಈ ಗೋ ಕಳ್ಳರಿಗೆ ಬಹಿಷ್ಕಾರ ಹಾಕುವ ಮೂಲಕ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಒಟ್ಟಾರೆ ಒಂದಿಬ್ಬರು‌ ಮಾಡುವ ಕೃತ್ಯದಿಂದಾಗಿ ಇಡೀ ಒಂದು ಸಮುದಾಯ ಅನುಭವಿಸಬೇಕಾಗಿ ಬಂದಿದೆ.ಗೋಕಳ್ಳರಿಗೆ ಎಲ್ಲ ರೀತಿಯಲ್ಕೂ ಬಹಿಷ್ಕಾರ ಹಾಕಿದರೆ ಗೋಕಳ್ಳತನ ನಿಯಂತ್ರಣಕ್ಕೆ ಬರಬಹುದು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ

- Advertisement -

Latest News

error: Content is protected !!