Friday, June 5, 2026
Homeತಾಜಾ ಸುದ್ದಿಮಂಗಳೂರು: ಕುಂಪಲ‌ ಶ್ರೀ ಬಾಲಕೃಷ್ಣ ಮಂದಿರ ಅಖಂಡ ಭಜನಾ ಸಪ್ತಾಹ, ತೃತೀಯ ದಿನದ ಸತ್ಸಂಗ

ಮಂಗಳೂರು: ಕುಂಪಲ‌ ಶ್ರೀ ಬಾಲಕೃಷ್ಣ ಮಂದಿರ ಅಖಂಡ ಭಜನಾ ಸಪ್ತಾಹ, ತೃತೀಯ ದಿನದ ಸತ್ಸಂಗ

- Advertisement -
- Advertisement -

ಕುಂಪಲ‌: ಮಾರ್ಚ್ 27ರಿಂದ ಏಪ್ರಿಲ್‌ 3ರ ತನಕ ನಡೆಯುವ ಅಖಂಡ ಭಜನಾ ಸಪ್ತಾಹದ ತೃತೀಯ ದಿನದ ಸತ್ಸಂಗ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನ ಆಶ್ರಮದ ಪ.ಪೂ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಮ.ನ.ಪಾ ಮಹಾ ಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ, ವಿಶ್ವಕರ್ಮ ಬ್ಯಾಂಕ್ ನ ಅಧ್ಯಕ್ಷರಾದ ಡಾ! ಎಸ್. ಆರ್. ಹರೀಶ್ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ವಿಕಾಸ್ ಪುತ್ತೂರು, ರೆಡ್ ಕ್ರಾಸ್ ಸೊಸೈಟಿಯ ಸಿ.ಎ. ಸೀತಾರಾಮ ಶೆಟ್ಟಿ ಆಗಮಿಸಿದ್ದರು.

ಶ್ರೀ ಬಾಲಕೃಷ್ಣ ಮಂದಿರದ ಪ್ರಧಾನ ಕಾರ್ಯದರ್ಶಿ ಶ್ರೀ ರವೀಂದ್ರ ಕುಂಪಲ, ರಜತ ಮಹೋತ್ಸವ ಕಾರ್ಯಾದ್ಯಕ್ಷ ಶ್ರೀ ಜಗದೀಶ್ ಆಚಾರ್ಯ, ಛತ್ರಪತಿ ಶಿವಾಜಿ ಫ್ರೆಂಡ್ಸ್ ನ ಅಶ್ವಿತ್ ರಾವ್, ಅಮೃತ ನಗರ ಸೇವಾ ಸಮಿತಿಯ ಸತ್ಯ ಪ್ರಸಾದ್, ಮಹಿಳಾ ಸಮಿತಿಯ ಮಮತಾ ಸತೀಶ್ ಉಪಸ್ಥಿತರಿದ್ದರು.

ಮಂದಿರದ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಸ್ವಾಗತಿಸಿದರು. ಕೃಷ್ಣ ಪೊನ್ನೆತ್ತೋಡು ಕಾರ್ಯಕ್ರಮ ನಿರ್ವಹಿಸಿದರು.

- Advertisement -

Latest News

error: Content is protected !!