Wednesday, June 3, 2026
Homeಕರಾವಳಿಸಂಪಾಜೆಯಲ್ಲಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣ: ಅಂತರ್ ರಾಜ್ಯ ಗ್ಯಾಂಗಿನ ನಾಲ್ವರ ಬಂಧನ

ಸಂಪಾಜೆಯಲ್ಲಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣ: ಅಂತರ್ ರಾಜ್ಯ ಗ್ಯಾಂಗಿನ ನಾಲ್ವರ ಬಂಧನ

- Advertisement -
- Advertisement -

ಸುಳ್ಯ: ಮಾ.21 ರಂದು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಜ್ಯೋತಿಷಿ ಚಟ್ಟೆಕಲ್ಲು ಅಂಬರೀಶ್ ಎಂಬವರ ಮನೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸರು ನಾಲ್ವರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಇಬ್ಬರು ತಮಿಳುನಾಡಿನವರಾಗಿದ್ದು, ಇಬ್ಬರು ಹಾಸನದವರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ 1 ಲಕ್ಷ 20 ಸಾವಿರ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನ ಕೊಯಮತ್ತೂರಿನ ಅಣ್ಣೂರು ತಾಲೂಕಿ ಕಾರ್ತಿಕ್ (38), ಹಾಸನದ ಚಿಕ್ಕಬುವನಹಳ್ಳಿಯ ಮಧುಕುಮಾರ್ (33), ಹಾಸನದ ವಿದ್ಯಾನಗರದ ದೀಕ್ಷಿತ್ ಕೆ.ಎನ್ (26) ಹಾಗೂ ತಮಿಳುನಾಡಿದ ಧರ್ಮಾಪುರಿಯ ಬಿ,ನರಸಿಂಹನ್ (40) ಬಂಧಿತ ಆರೋಪಿಗಳು.

- Advertisement -

Latest News

error: Content is protected !!