Wednesday, June 24, 2026
Homeಕರಾವಳಿಬಂಟ್ವಾಳದಲ್ಲಿ ರಿಕ್ಷಾದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದವ ಅಂದರ್

ಬಂಟ್ವಾಳದಲ್ಲಿ ರಿಕ್ಷಾದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದವ ಅಂದರ್

- Advertisement -
- Advertisement -

ಬಂಟ್ವಾಳ : ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾತನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ  ಬಂಟ್ವಾಳ ನಗರ ಠಾಣೆಯ ಎಸ್. ಐ. ಅವಿನಾಶ್ ನೇತ್ರತ್ವದ ತಂಡ ಬಂಧಿಸಿದೆ.

ಸಜೀಪ ನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಸಿದ್ದೀಕ್ ಯಾನೆ ಕೋಳಿ ಸಿದ್ದೀಕ್ ( 36) ಬಂಧಿತ ಆರೋಪಿ. ಆರೋಪಿ‌ತನಿಂದ ಸುಮಾರು 80 ಸಾವಿರ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

2 ಸಾವಿರ ಮೌಲ್ಯದ ಗಾಂಜಾ, 60 ಸಾವಿರ ರೂ ಮೌಲ್ಯದ ರಿಕ್ಷಾ 1260 ರೂಪಾಯಿ ನಗದು ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಬರ್ಕೆ ಎಂಬಲ್ಲಿ ರಿಕ್ಷಾದಲ್ಲಿ ಗಾಂಜಾ ಇರಿಸಿ ಗಿರಾಕಿಗಳಿಗೆ ಮಾರಾಟ ಮಾಡುವುದಕ್ಕಾಗಿ ಕಾಯುತ್ತಿದ್ದ. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ನೋಡಿ ಆತ ರಿಕ್ಷಾ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾನೆ.ಆದರೆ ಪೋಲೀಸರು ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಚಾರಣೆ  ನಡೆಸಿದಾಗ ಉಪ್ಪಳ ಕಡೆಯಿಂದ ಗಾಂಜಾನವನ್ನು ತಂದು ಪ್ಯಾಕೆಟ್ ಗಳನ್ನಾಗಿ ಮಾಡಿ ಗಿರಾಕಿಗಳಿಗೆ ಮಾರಾಟ ‌ಮಾಡುವ ಬಗ್ಗೆ ಆತ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ.ಆರೋಪಿಯನ್ನು ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Latest News

error: Content is protected !!