Sunday, June 7, 2026
Homeಕರಾವಳಿಕೊಕ್ಕಡ,ಅರಸಿನಮಕ್ಕಿ ಭಾಗದ ಜನತೆಯ ಹಲವಾರು ವರ್ಷದ ಬೇಡಿಕೆಯನ್ನು ಪೂರೈಸಿದ ಶಾಸಕ ಹರೀಶ್ ಪೂಂಜ

ಕೊಕ್ಕಡ,ಅರಸಿನಮಕ್ಕಿ ಭಾಗದ ಜನತೆಯ ಹಲವಾರು ವರ್ಷದ ಬೇಡಿಕೆಯನ್ನು ಪೂರೈಸಿದ ಶಾಸಕ ಹರೀಶ್ ಪೂಂಜ

- Advertisement -
- Advertisement -

ಕೊಕ್ಕಡ: ದ.ಕ.ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತೆಡ್ಕ ಮತ್ತು ಶಿಶಿಲ ದೇವಾಲಯಕ್ಕೆ ಸಂಪರ್ಕ ಸೇತುವಾಗಿರುವ ಕೊಕ್ಕಡ- ಅರಸಿನಮಕ್ಕಿ ನಡುವೆ ಸುಸಜ್ಜಿತ ರಸ್ತೆ ಬೇಕೆನ್ನುವುದು ಆ ಭಾಗದ ಜನತೆಯ ಬಲು ವರ್ಷದ ಬೇಡಿಕೆಯಾಗಿತ್ತು.

ಶಿಬಾಜೆ, ಶಿಶಿಲ, ಅರಸಿನಮಕ್ಕಿ ಮತ್ತು ರೆಖ್ಯಾದ ಹಲವಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಕಳಪೆಯಾಗಿದ್ದ ರಸ್ತೆಯಲ್ಲೇ ಸಂಚರಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಹರೀಶ್ ಪೂಂಜಾ, ಈ ಹಿಂದೆಯೇ12 ಕೋಟಿ ರೂ.ಗೂ ಅಧಿಕ ಮೊತ್ತದ ಭಾರೀ ಕಾಮಗಾರಿಗೆ ಚಾಲನೆ ನೀಡಿದ್ದರು. ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ.

ಈ ಭಾಗದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ಅರಸಿನಮಕ್ಕಿಯ ಜನತೆಗೆ ಮಾಡಿರುವ ವಾಗ್ದಾನವನ್ನು ಶಾಸಕ ಹರೀಶ್ ಪೂಂಜರವರು ಹಂತ ಹಂತವಾಗಿ ಈಡೇರಿಸುತ್ತಿದ್ದಾರೆ. ಇದೀಗ ಸುಸಜ್ಜಿತ ರಸ್ತೆ ಹಾಗೂ ಬೃಹತ್ ಸೇತುವೆ ನಿರ್ಮಾಣದ ಸರದಿ. ಸುಂದರವಾದ ಅರಸಿನಮಕ್ಕಿಯನ್ನು ನಿರ್ಮಿಸುವಲ್ಲಿ ಕಾಪಿನಬಾಗಿಲು-ಅರಸಿನಮಕ್ಕಿ ರಸ್ತೆಯನ್ನು ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಅಗಲೀಕರಿಸಿ ಮೇಲ್ದರ್ಜೆ ಗೇರಿಸಿ ಮರುಡಾಮರೀಕರಣ ಮಾಡಲಾಗುತ್ತಿದ್ದು ಕಾಮಗಾರಿ ಅಂತಿಮ ಘಟ್ಟ ತಲುಪುತ್ತಿದ.

ಹೊಸ ಸೇತುವೆ ನಿರ್ಮಾಣ:

ಅರಸಿನಮಕ್ಕಿಯಲ್ಲಿ ಕಪಿಲಾ ನದಿಗೆ ಈಗಿರುವ ಸೇತುವೆ ಸುಮಾರು 55 ವರ್ಷಕ್ಕೂ ಹಳೆಯದು. ಈ ಬಗ್ಗೆ ಸ್ಥಳೀಯ ಜನತೆ ಶಾಸಕರ ಗಮನಕ್ಕೆ ತಂದಿದ್ದರು. “ನಿಮಗೆ ರಸ್ತೆಯ ಜೊತೆಗೆ ಹೊಸ ಸೇತುವೆ ಮಾಡಿಸಿಕೊಟ್ಟರೆ ಸರಿಯಲ್ಲವೇ? ” ಎಂದಿದ್ದರು ನಮ್ಮ ಶಾಸಕರು. ಅವರ ಭರವಸೆ ಈಡೇರುತ್ತಿದೆ….ಇಂದು ಹೊಸ ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿ ಕಾಮಗಾರಿಗಳು ಆರಂಭಗೊಂಡಿವೆ. ಶಾಸಕರ ಈ ಕಾರ್ಯಕ್ಕೆ ಶಿಶಿಲ, ಶಿಬಾಜೆ ಮತ್ತು ಅರಸಿನಮಕ್ಕಿಯ ಜನತೆ ಧನ್ಯವಾದ ತಿಳಿಸಿದ್ದಾರೆ.

- Advertisement -

Latest News

error: Content is protected !!