Monday, May 6, 2024
Homeಕರಾವಳಿಶಾಸಕರ ಮಾರ್ಗದರ್ಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಮ್ಯಾಜಿಕ್ ಮಾಡಿದ ರೆಖ್ಯಾದ ಬಿಜೆಪಿ ಕಾರ್ಯಕರ್ತರು !

ಶಾಸಕರ ಮಾರ್ಗದರ್ಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಮ್ಯಾಜಿಕ್ ಮಾಡಿದ ರೆಖ್ಯಾದ ಬಿಜೆಪಿ ಕಾರ್ಯಕರ್ತರು !

spot_img
- Advertisement -
- Advertisement -

ರೆಖ್ಯಾ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗಡಿ ಭಾಗದಲ್ಲಿರುವ ಕಟ್ಟ ಕಡೆಯ ಗ್ರಾಮವೆಂದರೆ ರೆಖ್ಯಾ. 2 ದಿನಗಳ ಹಿಂದೆ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಗ್ರಾಮದ ನಡುಬೈಲು ನಿವಾಸಿ ರವೀಂದ್ರ ಎಂಬವರ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು.

ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ರವೀಂದ್ರ ಅವರಿಗೆ ಮನೆಯ ಆ ಕ್ಷಣದ ದುಸ್ಥಿತಿ ಕಂಡು ಬಡತನದ ಬೇಗೆಗೆ ಮತ್ತಷ್ಟು ಬರೆ ಎಳೆದಂತಾಗಿತ್ತು. ಕೈ ಚೆಲ್ಲಿ ಕುಳಿತಿದ್ದ ರವೀಂದ್ರ ಆವರಿಗೆ ಕಣ್ಣೀರು ಒರೆಸಲು ಬಂದದ್ದು ಬೆಳ್ತಂಗಡಿಯ ಜನಪ್ರಿಯ ಶಾಸಕ ಹರೀಶ್ ಪೂಂಜ.

ತನ್ನ ಕ್ಷೇತ್ರದ ಜನತೆಯ ನೋವನ್ನು ತನ್ನ ನೋವೆಂದು ಭಾವಿಸುವ ಬಲು ಅಪರೂಪದ ಶಾಸಕ ಹರೀಶ್ ಪೂಂಜ, ರವೀಂದ್ರ ಅವರ ಮನೆಯ ವಿಷಯ ತಿಳಿದ ತಕ್ಷಣ ಬೆಳ್ತಂಗಡಿಯಿಂದ 40 ಕಿಮೀ ದೂರದಲ್ಲಿರುವ ರೆಖ್ಯಾ ಗ್ರಾಮಕ್ಕೆ ಓಡೋಡಿ ಬಂದಿದ್ದರು.

ರವೀಂದ್ರ ಅವರ ಕುಟುಂಬಕ್ಕೆ ಭರವಸೆಯ ಮಾತುಗಳನ್ನಾಡಿ, ತಕ್ಷಣ ಮನೆಯ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಬೇಕಾಗುವ ವ್ಯವಸ್ಥೆಯನ್ನು ತನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರಿಗೆ ವಹಿಸಿದರು. ಮತ್ತು ಅದಕ್ಕೆ ಬೇಕಾಗುವ ಆರ್ಥಿಕ ನೆರವನ್ನು ತನ್ನ ವೈಯಕ್ತಿಕ ಹಣದಿಂದ ನೀಡಿದ್ದರು.

ಶಾಸಕ ಹರೀಶ್ ಪೂಂಜರ ಮಾರ್ಗದರ್ಶನದಿಂದ ಕೂಡಲೇ ಕಾರ್ಯಪ್ರವೃತ್ತರಾದ ಉತ್ಸಾಹಿ ಬಿಜೆಪಿ ಕಾರ್ಯಕರ್ತರು ಮತ್ತು ರೆಖ್ಯಾ ಗ್ರಾಮದ ಸ್ಥಳೀಯ ನಾಗರಿಕರು ಮನೆಯ ದುರಸ್ತಿ ಕಾರ್ಯಕ್ಕೆ ಬೇಕಾಗುವ ಸಲಕರಣೆಗಳ ವ್ಯವಸ್ಥೆ ಮಾಡಿದರು.

ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರವೀಂದ್ರರಿಗೆ ಯಾವುದೇ ರೀತಿಯ ಹೊರೆಯಾಗದೆ ಮನೆಯ ದುರಸ್ತಿ ಕಾರ್ಯವನ್ನು ಮಾಡಿ ಮುಗಿಸಿರುವವರು ನವೀನ್ ರೆಖ್ಯಾ. ಬೇಬಿಕಿರಣ್ ಎಂಜಿರ, ಲೋಕೇಶ್ ಕೆಳೆಂಜೀನೋಡಿ, ನಿತೀನ್ ಕೆಳೆಂಜೀನೋಡಿ. ಪವನ್ ಪರತ್ತಿಲ್, ಸೀತರಾಮ ಕೊಟ್ಟೆದಗುಡ್ಡೆ, ಅನಂದ ನಡುಬೈಲು, ಚೇತನ್ ಕೆರೆಜಾಲ್. ನವೀನ್ ಕೆರೆಜಾಲ್. ಉದಯ ಪಿ ಕೆ.ಕೆರೆಜಾಲ್, ಯೋಗಿಶ್ ಪಿಲತ್ತಡಿ, ಯೋಗಿಶ್ ನಾಗಂಡ, ಭರತೇಶ್ ಗೊಬ್ಬರತಂಡ, ಧನಂಜಯ ಪಡ್ಪು. ಚೇತನ್ ಪಡ್ಪು. ದಿಪು ಸಂಪಿಗೆತಡಿ. ಪ್ರವೀಣ್ ಪರಕಲ. ಗಿರೀಶ್ ಕೆಳೆಂಜೀನೋಡಿ ಮತ್ತು ಕಾರ್ತಿಕ್ ಎಡ್ಮಕ್ಕ.

ಮನೆಯ ದುರಸ್ತಿಗೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ತಾವೇ ಜೋಡಿಸಿ, ಒಂದು ದಿನದಲ್ಲೇ ರವೀಂದ್ರ ಅವರಿಗೆ ಮನೆಯ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ ಈ ಯುವಕರ ತಂಡ. ಶಾಸಕರ ಸೂಚನೆಯನ್ನು ಶ್ರದ್ದೆಯಿಂದ ಪಾಲಿಸಿ ರವೀಂದ್ರ ಅವರ ಮನೆ ಮತ್ತು ಮನದಲ್ಲಿ ಖುಷಿಯನ್ನು ಮೂಡಿಸಿದ ಈ ಯುವಕರ ಕಾರ್ಯವನ್ನು ರೆಖ್ಯಾ ಗ್ರಾಮದ ಜನತೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

- Advertisement -
spot_img

Latest News

error: Content is protected !!