Monday, September 9, 2024
Homeಕರಾವಳಿರೆಖ್ಯಾ: ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ, ಕೂಡಲೇ ಸ್ಥಳಕ್ಕಾಗಮಿಸಿ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ...

ರೆಖ್ಯಾ: ಭಾರಿ ಮಳೆಗೆ ಮನೆ ಸಂಪೂರ್ಣ ಹಾನಿ, ಕೂಡಲೇ ಸ್ಥಳಕ್ಕಾಗಮಿಸಿ ಕುಟುಂಬಕ್ಕೆ ಧೈರ್ಯ ತುಂಬಿದ ಶಾಸಕ ಹರೀಶ್ ಪೂಂಜ

spot_img
- Advertisement -
- Advertisement -

ರೆಖ್ಯಾ: ಇಂದು ಸಂಜೆ ಸುರಿದ ಭಯಂಕರ ಗಾಳಿ ಮಳೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನಡುಬೈಲು ಎಂಬಲ್ಲಿ ರವೀಂದ್ರರವರ ಮನೆ ಸಂಪೂರ್ಣ ಹಾನಿಗೆ ಒಳಗಾಗಿದೆ.

ಸ್ಥಳೀಯ ಬಿಜೆಪಿ ಮುಖಂಡರಿಂದ ವಿಷಯ ತಿಳಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೂಡಲೇ ತಮ್ಮ ಎಲ್ಲ ಕೆಲಸವನ್ನು ಬದಿಗಿಟ್ಟು ತಾಲೂಕಿನ ಗಡಿ ಭಾಗದ ರೆಖ್ಯಾ ಗ್ರಾಮಕ್ಕೆ ಆಗಮಿಸಿ ರವೀಂದ್ರ ಅವರ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಸರಕಾರದಿಂದ ಸಿಗುವ ನೆರವನ್ನು ಆದಷ್ಟು ಬೇಗ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಕಾರ್ಯಕರ್ತನ ನೋವಿಗೆ ಯುವ ಶಾಸಕರ ಹೃದಯ ಮಿಡಿದ ರೀತಿಗೆ ಗ್ರಾಮದ ಜನತೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರಾದ ನವೀನ್ ಕೆಲೆಂಜಿನೋಡಿ, ಪವನ್ ಪರತ್ತಿಲ್, ಬೇಬಿ ಕಿರಣ್, ಗಿರೀಶ್ ಗೌಡ ಮತ್ತು ನಡುಬೈಲು ಪರಿಸರದ ಜನತೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!