Friday, June 5, 2026
Homeಕರಾವಳಿಕಾಸರಗೋಡು: ಮೋಟಾರ್ ಬೈಕ್‌ಗೆ ಟ್ರಕ್ ಡಿಕ್ಕಿ, ಸವಾರರಿಬ್ಬರೂ ಸ್ಥಳದಲ್ಲೇ ದುರ್ಮರಣ

ಕಾಸರಗೋಡು: ಮೋಟಾರ್ ಬೈಕ್‌ಗೆ ಟ್ರಕ್ ಡಿಕ್ಕಿ, ಸವಾರರಿಬ್ಬರೂ ಸ್ಥಳದಲ್ಲೇ ದುರ್ಮರಣ

- Advertisement -
- Advertisement -

ಕಾಸರಗೋಡು: ಇಲ್ಲಿನ ಸಮೀಪದ ಉದುಮದಲ್ಲಿ ಇಂದು ಮೋಟಾರ್ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ.

ಮಲಪ್ಪುರಂ ನಿವಾಸಿಗಳಾದ ಜಮ್ಶೀರ್ (22) ಮತ್ತು ಮೊಹಮ್ಮದ್ ಶಿಬಿಲ್ (20) ಮೃತ ದುರ್ದೈವಿಗಳು. ಐಎಸ್ಎಲ್ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಿಸಲು ಗೋವಾಕ್ಕೆ ತೆರಳುತ್ತಿದ್ದರು.

ಟ್ರಕ್ ಕಾಸರಗೋಡು ಕಡೆಯಿಂದ ಸಂಚರಿಸುತ್ತಿದ್ದು, ಎದುರುಗಡೆಯಿಂದ ಬೈಕ್ ಬರುತ್ತಿತ್ತು. ಈ ವೇಳೆ ಮೋಟಾರ್ ಬೈಕ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

- Advertisement -

Latest News

error: Content is protected !!