Sunday, June 7, 2026
Homeತಾಜಾ ಸುದ್ದಿಮಂಡ್ಯ: 15 ವರ್ಷಗಳ ಹಿಂದಿನ ಮಸೀದಿ ದಾಳಿ ಪ್ರಕರಣ, 28 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಮಂಡ್ಯ: 15 ವರ್ಷಗಳ ಹಿಂದಿನ ಮಸೀದಿ ದಾಳಿ ಪ್ರಕರಣ, 28 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

- Advertisement -
- Advertisement -

ಮಂಡ್ಯ: 15 ವರ್ಷಗಳ ಹಿಂದೆ ಮಸೀದಿ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿದ್ದ 28 ಆರೋಪಿಗಳನ್ನು ಕರ್ನಾಟಕದ ನ್ಯಾಯಾಲಯ ಖುಲಾಸೆಗೊಳಿಸಿದೆ.

ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಈ ತೀರ್ಪು ನೀಡಿದೆ.

2007ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ‘ಭಗವಧ್ವಜ’ (ಕೇಸರಿ ಧ್ವಜ) ಹಾರಿಸಲಾಗಿತ್ತು, ನಂತರ ಅದನ್ನು ಕೆಲ ದುಷ್ಕರ್ಮಿಗಳು ಸುಟ್ಟು ಹಾಕಿದ್ದರು.

ಇದರಿಂದ ಕೋಪಗೊಂಡ ಹಿಂದೂ ಕಾರ್ಯಕರ್ತರು ಅದೇ ಪ್ರದೇಶದ ಮಸೀದಿಯೊಳಗೆ ನುಗ್ಗಿ ಮಸೀದಿಯನ್ನು ಧ್ವಂಸಗೊಳಿಸಿ ಸುಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 47 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 28 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

- Advertisement -

Latest News

error: Content is protected !!