Monday, May 13, 2024
Homeಕರಾವಳಿಬೆಳ್ತಂಗಡಿ ಇಂದಬೆಟ್ಟಿನಲ್ಲಿ‌ ಅರಣ್ಯ ಇಲಾಖೆಯಿಂದ ಕ್ಯಾಮೆರಾ ಟ್ರ್ಯಾಪಿಂಗ್: ಕ್ಯಾಮೆರಾದಲ್ಲಿ ಚಿರತೆ, ಕರಡಿ ಪತ್ತೆ

ಬೆಳ್ತಂಗಡಿ ಇಂದಬೆಟ್ಟಿನಲ್ಲಿ‌ ಅರಣ್ಯ ಇಲಾಖೆಯಿಂದ ಕ್ಯಾಮೆರಾ ಟ್ರ್ಯಾಪಿಂಗ್: ಕ್ಯಾಮೆರಾದಲ್ಲಿ ಚಿರತೆ, ಕರಡಿ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಹುಲಿ ಗಣತಿ ಯೋಜನೆಯ ಅಂಗವಾಗಿ ಅರಣ್ಯ ಇಲಾಖೆ ನಡೆಯುತ್ತಿರುವ ಕ್ಯಾಮೆರಾ ಟ್ರ್ಯಾಪಿಂಗ್ ನಲ್ಲಿ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುರುಬರ ಗುಡ್ಡದ ಕಾಡು ಮನೆ ಪ್ರದೇಶದಲ್ಲಿ ಇರಿಸಲಾಗಿರುವ ಕ್ಯಾಮೆರಾದಲ್ಲಿ ಚಿರತೆ, ಕರಡಿ ಹಲವು ಬಾರಿ ಸೆರೆಯಾಗಿವೆ.

ಈ ಪ್ರದೇಶದಲ್ಲಿ ಚಿರತೆ ಕರಡಿ ಓಡಾಟ ನಿರಂತರವಾಗಿರುವುದು ದೃಢಪಟ್ಟಿದೆ.ಇಲ್ಲಿ ಚಿರತೆ,ಕರಡಿ ಆಗಾಗ ಕಂಡು ಬರುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಆದರೆ ಇದುವರೆಗೆ ಯಾವುದೇ ಹೆಚ್ಚಿನ ಅಪಾಯ ಉಂಟು ಮಾಡಿಲ್ಲ. ಅಲ್ಲದೆ ಕಾಡುಹಂದಿ, ಮುಳ್ಳುಹಂದಿ,ಜಿಂಕೆ ಮೊದಲಾದ ಪ್ರಾಣಿಗಳು ಕೂಡ ಕ್ಯಾಮೆರಾ ಎದುರು ಅನೇಕ ಬಾರಿ ಓಡಾಟ ನಡೆಸಿವೆ.ತೋಟತ್ತಾಡಿಯಲ್ಲಿ ಇರಿಸಲಾಗಿರುವ ಕ್ಯಾಮರಾದಲ್ಲು ಮಾ. 7ರಂದು ಚಿರತೆ ಸೆರೆಯಾಗಿತ್ತು. ಇದರಿಂದ ಸದ್ಯ ತಾಲೂಕಿನ ಎರಡು ಗ್ರಾಮಗಳಲ್ಲಿ ಚಿರತೆ ಇರುವುದು ದೃಢವಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಹಲವು ಕಡೆ ಕ್ಯಾಮೆರಾ ಟ್ರ್ಯಾಪಿಂಗ್ ನಡೆಸುತ್ತಿರುವ ಪ್ರದೇಶಗಳ ಸುತ್ತಮುತ್ತ ಕಾಡಾನೆಗಳ ಸಂಚಾರವಿದ್ದರು ಕ್ಯಾಮೆರಾ ಎದುರು ಕಂಡುಬಂದಿಲ್ಲ.

- Advertisement -
spot_img

Latest News

error: Content is protected !!