Thursday, May 16, 2024
Homeಕರಾವಳಿ6.67 ಕೋಟಿ ವೆಚ್ಚದಲ್ಲಿ ರಾಯಿ ಮುದ್ದಾಜೆ ರಸ್ತೆ ಕಾಂಕ್ರೀಟಿಕರಣ ಹಾಗೂ ಸಂಪರ್ಕ ಸೇತುವೆ ನಿರ್ಮಾಣ: ಕಾಮಗಾರಿಗೆ...

6.67 ಕೋಟಿ ವೆಚ್ಚದಲ್ಲಿ ರಾಯಿ ಮುದ್ದಾಜೆ ರಸ್ತೆ ಕಾಂಕ್ರೀಟಿಕರಣ ಹಾಗೂ ಸಂಪರ್ಕ ಸೇತುವೆ ನಿರ್ಮಾಣ: ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ರಿಂದ ಶಂಕುಸ್ಛಾಪನೆ

spot_img
- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಗುತ್ತಿಗೆ ಬಳ್ಳಿಯಿಂದ ರಾಯಿ ಮುದ್ದಾಜೆ ರಸ್ತೆ ಕಾಂಕ್ರೀಟಿಕರಣ ಹಾಗೂ   ಸಂಪರ್ಕ ಸೇತುವೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಶಂಕು ಸ್ಥಾಪನೆ ನೆರವೇರಿಸಿರು.

6.67 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಸಂಗಬೆಟ್ಟು-ಕರ್ಪೆ ಗ್ರಾಮದ ಅಭಿವೃದ್ಧಿಗೆ ಸುಮಾರು 23 ಕೋಟಿ ಗಿಂತಲೂ ಅಧಿಕ ಅನುದಾನ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಪ್ರತಿಯೊಂದ ಬೇಡಿಕೆಯನ್ನು ಹಂತಹಂತವಾಗಿ ಮಾಡುವುದಾಗಿ ಹೇಳಿದರು.ಅಲ್ಲದೇ  ಗ್ರಾಮದ ಅಭಿವೃದ್ಧಿ ಕಾಮಗಾರಿ ಗಳು ನಡೆಯುವ ಸಂದರ್ಭದಲ್ಲಿ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

 ಕರ್ಪೆ ಹಾಗೂ ರಾಯಿ ಗ್ರಾಮದ ಜನತೆಯ ಪ್ರೀತಿ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಶಾಸಕನಾದ ಮೇಲೆ ಕೆಲಸ ಮಾಡುವುದು ನನ್ನ ಕರ್ತವ್ಯ. ಅದನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ಸಂತೋಷ ಇದೆ ಎಂದು ಅವರು ಹೇಳಿದರು.

   ಇದೇ ವೇಳೆ ಮಾತನಾಡಿದ ಮಾಜಿ.ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಗ್ರಾಮದ ಅಭಿವೃದ್ಧಿ ಗಾಗಿ ಕೋಟಿ ಕೋಟಿ ಅನುದಾನ ಒದಗಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಅಭಿವೃದ್ಧಿ ಹರಿಕಾರ ರಾಜೇಶ್ ನಾಯ್ಕ್ ಅವರು ಇತರರಿಗೆ ಮಾದರಿ ಎಂದರು.

ಸಂಗಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಮಾಜಿ ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಒಳಚರಂಡಿ ನಿಗಮದ  ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ತಾ.ಪಂ.ಮಾಜಿ ಸದಸ್ಯ ಅರ್ಕಿಕೀರ್ತಿ ಇಂದ್ರ, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಗ್ರಾಮಪಂಚಾಯತ್ ಸದಸ್ಯರಾದ ವಿದ್ಯಾಪ್ರಭು,  ಹೇಮಲತಾ, ರಾಜೀವಿ ಪೂಜಾರಿ,  ಸಂದೇಶ್ ಶೆಟ್ಟಿ,  ಪ್ರಮುಖರಾದ ರತ್ನಕುಮಾರ್ ಚೌಟ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಉಮೇಶ್ ಅರಳ, ಸುದರ್ಶನ ಬಜ, ಕಾರ್ತಿಕ್ ಬಲ್ಲಾಳ್, ರಾಯಿ ಗ್ರಾಮ ಪಂಚಾಯತ್ ಸದಸ್ಯ  ಸಂತೋಷ್ ರಾಯಿಬೆಟ್ಟು,  ನವೀನ್ ಕುಮಾರ್, ತೇಜಸ್, ಹರೀಶ್ ಆಚಾರ್ಯ ರಾಯಿ, ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಭಾಕರ್ ,ಪಿ.ಎಂ.ಜಿ.ಎಸ್.ವೈ ವಿಭಾಗದ ಇಂಜಿನಿಯರ್ ಪ್ರಸನ್ನ ಕುಮಾರ್,   ಪಿ.ಡಿಒ ಪದ್ಮನಾಯ್ಕ್, ತಾ.ಪಂ.ಮಾಜಿ ಸದಸ್ಯೆ ರೇವತಿ, ಮೊಗರೋಡಿ ಕನ್ ಸ್ಟ್ರೈಕ್ ಸನ್ ಇಂಜಿನಿಯರ್ ದಾಮೋದರ  ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!