Thursday, June 4, 2026
Homeಕರಾವಳಿತಿರುವನಂತಪುರಂ: ಇಲಿ ಪಾಷಾಣ ಸೇವಿಸಿ 3 ವರ್ಷದ ಮಗು ಸಾವು !

ತಿರುವನಂತಪುರಂ: ಇಲಿ ಪಾಷಾಣ ಸೇವಿಸಿ 3 ವರ್ಷದ ಮಗು ಸಾವು !

- Advertisement -
- Advertisement -

ಕೇರಳದ ಮಲಪ್ಪುರಂನಲ್ಲಿ ಇಲಿ ಪಾಷಾಣ ಸೇವನೆ ಮಾಡಿ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಕ್ಕಳು ಆಟವಾಡುವಾಡುತ್ತಿದ್ದ ಸಮಯದಲ್ಲಿ ಮಗುವಿಗೆ ಅಲ್ಲಿ ಎಸೆದಿದ್ದ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ. ಆಗ ಬಾಲಕ ಅದನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ.

ಮಗು ಇಲಿ ಪಾಷಾಣ ಸೇವಿಸಿರುವ ವಿಚಾರ ತಿಳಿದ ಪೋಷಕರು ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ.

ಬಾಲಕನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 3 ದಿನಗಳ ಕಾಲ ಮಗುವಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ.

- Advertisement -

Latest News

error: Content is protected !!