Sunday, May 5, 2024
Homeಕರಾವಳಿಮಲಗಿದ್ದಲ್ಲೇ ಇದ್ದ ಮಗು ನಾಲ್ಕೇ ದಿನದಲ್ಲೇ ಓಡಾಡಿದ್ದು ಹೇಗೆ?: ಇದು ಸುಳ್ಯದ ಗೂನಡ್ಕದ ಕೊರಗಜ್ಜನ ಪವಾಡ

ಮಲಗಿದ್ದಲ್ಲೇ ಇದ್ದ ಮಗು ನಾಲ್ಕೇ ದಿನದಲ್ಲೇ ಓಡಾಡಿದ್ದು ಹೇಗೆ?: ಇದು ಸುಳ್ಯದ ಗೂನಡ್ಕದ ಕೊರಗಜ್ಜನ ಪವಾಡ

spot_img
- Advertisement -
- Advertisement -

ಸುಳ್ಯ: ತುಳುನಾಡಿನಲ್ಲಿ ಕೊರಗಜ್ಜನ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂದ್ಹಾಗೆ ಕೊರಗಜ್ಜನ ಮೂಲ ಸ್ಥಾನ ಕುತ್ತಾರಿನಲ್ಲಿನಲ್ಲಾದರೂ ಕರಾವಳಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕೊರಗಜ್ಜನ ದೇವಸ್ಥಾನಗಳಿವೆ. ಅದರಲ್ಲಿ ತನ್ನ ಕಾರ್ಣಿಕದ ಮೂಲಕ ಭಕ್ತರನ್ನು ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕದ ದೊಡ್ಡಡ್ಕದಲ್ಲಿರುವ ಕೊರಗಜ್ಜನ ಕ್ಷೇತ್ರ.

ಕಳೆದ 40 ವರ್ಷಗಳಿಂದ ಇಲ್ಲಿ ಕೊರಗಜ್ಜನನ್ನು ಆರಾಧಿಸಿಕೊಂಡು ಬರಲಾಗುತ್ತಿದೆ. ಇನ್ನು ಕಳೆದ ವರ್ಷ ಈ ಕ್ಷೇತ್ರದಲ್ಲಿ ಪವಾಡವೊಂದು ನಡೆದಿತ್ತು. ಕಾಲಾವಧಿ ಜಾತ್ರೋತ್ಸವದ ವೇಳೆ 12 ದೈವದ ಕೋಲಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ದೈವ ನಡೆಯತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ಹಲವು ಮಂದಿಗೆ 13 ದೈವಗಳು ಗೋಚರಿಸಿ ಅಚ್ಚರಿ ಮೂಡಿಸಿತ್ತು.

ಇನ್ನು ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ತಮ್ಮ ಕಣ್ಣ ಮುಂದೆಯೇ ನಡೆದ ಪವಾಡವೊಂದರ ಬಗ್ಗೆ ಇಲ್ಲಿನ ಆಡಳಿತ ಮೊಕ್ತೇಸರರಾದ ಚಂದ್ರಶೇಖರ್ ಅವರು ಹೇಳಿದ್ದಾರೆ. ತುಂಬಾ ಸಮಯದಿಂದ ಮಲಗಿದ್ದಲ್ಲೇ ಇದ್ದ ಮಗುವೊಂದರ ಪೋಷಕರು ಇಲ್ಲಿಗೆ ಬಂದು ಪ್ರಸಾದ ಸ್ವೀಕರಿಸಿದ ನಾಲ್ಕೇ ದಿನದಲ್ಲಿ ಆ ಮಗು ಓಡಾಡುವುದಕ್ಕೆ ಆರಂಭಿಸಿದೆಯಂತೆ. ಇಂತಹ ಅನೇಕ ಪವಾಡಗಳು ಇಲ್ಲಿ ನಡೆದಿವೆ.

ಇನ್ನು ಇದೇ ತಿಂಗಳ19 ಹಾಗೂ 20 ರಂದು ಇಲ್ಲಿ 41 ವರ್ಷದ ಆದಿಬ್ರಹ್ಮ ಮೊಗೇರ್ಕಳ ನೇವೋತ್ಸವ ನಡೆಯಲಿದೆ. ಈ ಬಾರಿ 16 ಕೊರಗಜ್ಜ ದೈವದ ಕೋಲ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂಲೂ ಇಲ್ಲಿಗೆ ಭಕ್ತರು ಆಗಮಿಸಲಿದ್ದಾರೆ.

- Advertisement -
spot_img

Latest News

error: Content is protected !!