Wednesday, June 3, 2026
Homeಕರಾವಳಿಉಡುಪಿಹೆಬ್ರಿ: ಮಹಿಳೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನ !

ಹೆಬ್ರಿ: ಮಹಿಳೆಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನ !

- Advertisement -
- Advertisement -

ಹೆಬ್ರಿ: ಮುದ್ರಾಡಿ ಗ್ರಾಮದ ಈಶ್ವರ ನಗರ ಬಲ್ಲಾಡಿ ಸಮೀಪ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಅಡ್ಡಕಟ್ಟಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.

ಪ್ರಮೋದಾ ಕುಲಾಲ್ ( 42 ) ಹಲ್ಲೆಗೊಳಗಾದವರು . ಇವರು ಬಲ್ಲಾಡಿಯ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಅವರ ಪರಿಚಯದ ವ್ಯಕ್ತಿ ಬಲರಾಮ ಎಂಬುವವರು ಯಾವುದೋ ವಿಚಾರದಲ್ಲಿ ಕೋಪಗೊಂಡು ಪ್ರಮೋದಾ ಅವರನ್ನು ಅಡ್ಡಕಟ್ಟಿ ಅವಾಚ್ಯ ಶಬ್ದದಿಂದ ಬೈದು ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ.

ಘಟನೆಯಿಂದ ಪ್ರಮೋದಾ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!