Thursday, June 4, 2026
Homeಕರಾವಳಿಕೊಣಾಜೆ ಹರೇಕಳದಲ್ಲಿ ಜುಮಾ ಮಸೀದಿ ದಫನ ಭೂಮಿಗೆ ಬಿಯರ್ ಬಾಟಲಿ ಎಸೆದ ದುಷ್ಕರ್ಮಿಗಳು

ಕೊಣಾಜೆ ಹರೇಕಳದಲ್ಲಿ ಜುಮಾ ಮಸೀದಿ ದಫನ ಭೂಮಿಗೆ ಬಿಯರ್ ಬಾಟಲಿ ಎಸೆದ ದುಷ್ಕರ್ಮಿಗಳು

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಕೊರಗಜ್ಜ ದೈವಸ್ಥಾನಗಳಿಗೆ ಅಪಮಾನ ಎಸಗಿದ ಘಟನೆಗಳು ಮರೆಯಾಗುವ ಮುನ್ನವೇ ಕೊಣಾಜೆಯ  ಹರೇಕಳ ಆಲಡ್ಕ ಬದ್ರಿಯ ಜುಮಾ ಮಸೀದಿಯ ಬಳಿ ಇರುವ ದಫನ ಭೂಮಿಯ ಬಳಿ ದುಷ್ಕರ್ಮಿಗಳು ಬಿಯರ್ ಬಾಟ್ಲಿಗಳನ್ನು ಎಸೆದು ದುಷ್ಕೃತ್ಯ ಮೆರೆದಿದ್ದಾರೆ.

ನಿನ್ನೆ ರಾತ್ರಿ ಘಟನೆ ನಡೆದಿದ್ದು, ಕೊಣಾಜೆ‌ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಇನ್ನು ದಫನ ಭೂಮಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲಿ ಹಾಗೂ ಮಾಂಸದ ತುಂಡುಗಳು ಪತ್ತೆಯಾಗಿವೆ.ಅಲ್ಲದೆ ದಫನದ ಹೊಂಡಗಳು, ಹೂತಿಟ್ಟ ಕಲ್ಲುಗಳಿಗೂ ಹಾನಿಗೊಳಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕೊಣಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿ, ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!