Sunday, June 7, 2026
Homeತಾಜಾ ಸುದ್ದಿಮೃತ ಹರ್ಷ ಕುಟುಂಬಕ್ಕೆ ರೇಣುಕಾಚಾರ್ಯ 6 ಲಕ್ಷ ರೂಪಾಯಿ ಧನಸಹಾಯ: ತಾಕತ್ತಿದ್ದರೇ ನನ್ನ ಮೇಲೆ ಅಟ್ಯಾಕ್...

ಮೃತ ಹರ್ಷ ಕುಟುಂಬಕ್ಕೆ ರೇಣುಕಾಚಾರ್ಯ 6 ಲಕ್ಷ ರೂಪಾಯಿ ಧನಸಹಾಯ: ತಾಕತ್ತಿದ್ದರೇ ನನ್ನ ಮೇಲೆ ಅಟ್ಯಾಕ್ ಮಾಡಿ ಎಂದು ಸವಾಲು

- Advertisement -
- Advertisement -

ಬೆಂಗಳೂರು: ಶಿವಮೊಗ್ಗದಲ್ಲಿ ಹತ್ಯೆಗೀಡಾದಂತ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಈ ಬಗ್ಗೆ ಎನ್‌ಐಎ ತನಿಖೆಯಾಗಬೇಕು. ನಾನು ಗುರುವಾರ ಶಿವಮೊಗ್ಗಕ್ಕೆ ತೆರಳುತ್ತಿದ್ದೇನೆ.
ತಾಕತ್ತಿದ್ದರೇ ನನ್ನ ಮೇಲೆ ಅಟ್ಯಾಕ್ ಮಾಡಿ ಎಂಬುದಾಗಿ ಶಾಸಕ ಎಂ.ಪಿ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಅಲ್ಲದೇ ಹರ್ಷನ ಕುಟುಂಬಕ್ಕೆ 6 ಲಕ್ಷ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹರ್ಷ ಹತ್ಯೆ ಮಾಡಿದವರನ್ನು ಎನ್ ಕೌಂಟರ್ ಮಾಡಬೇಕು. ಅವರ ಕುಟುಂಬದ ಕಷ್ಟ ನೋಡಿದ್ರೇ ನನಗೆ ತುಂಬಾ ನೋವಾಗುತ್ತಿದೆ. ನಾನು ವೈಯಕ್ತಿಕವಾಗಿ ಅವರ ಕುಟುಂಬಕ್ಕೆ 6 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.

ರಾಜ್ಯದಲ್ಲಿ ಇದುವರೆಗೆ 15ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. ಎಲ್ಲಾ ಮುಸ್ಲೀಂರು ದೇಶದ್ರೋಹಿಗಳಲ್ಲ. ಪಾಕ್ ಪರ ಘೋಷಣೆ ಕೂಗುವರು ದೇಶದ್ರೋಹಿಗಳು. ತಾಕತ್ತಿದ್ದರೇ ನಾನು ಗುರುವಾರ ಶಿವಮೊಗ್ಗಕ್ಕೆ ಭೇಟಿ ನೀಡ್ತಾ ಇದ್ದೇನೆ. ನನ್ನ ಮೇಲೆ ಅಟ್ಯಾಕ್ ಮಾಡಿ ನೋಡಿಕೊಳ್ಳುತ್ತೇವೆ ಎಂದು ಸವಾಲ್ ಹಾಕಿದರು.

- Advertisement -

Latest News

error: Content is protected !!