Saturday, June 6, 2026
Homeಅಪರಾಧಮಂಗಳೂರು: ಮನೆ ಕೊಡಿಸುವುದಾಗಿ ನಂಬಿಸಿ 5ಲಕ್ಷ ರೂ ವಂಚನೆ

ಮಂಗಳೂರು: ಮನೆ ಕೊಡಿಸುವುದಾಗಿ ನಂಬಿಸಿ 5ಲಕ್ಷ ರೂ ವಂಚನೆ

- Advertisement -
- Advertisement -

ಮಂಗಳೂರು: ಬೆಳ್ತಂಗಡಿ ಮೂಲದ ಮಹಿಳೆಯೊಬ್ಬರಿಗೆ ಲೀಸ್ ಗೆ ಮನೆ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಗಳು 5 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ದಾಖಲಾಗಿದೆ.


ವಾಮಂಜೂರು ನಿವಾಸಿ ಪ್ರದೀಪ್ ಯಾನೆ, ದೀಪಕ್ ಸಾವಿಯೋ ಮತ್ತು ಇಮ್ತಿಯಾಜ್ ಮೋಸ ಮಾಡಿರುವ ವ್ಯಕ್ತಿ ಗಳಾಗಿದ್ದು, ಪೊಲೀಸರು ಬಂಧಿಸಿದ್ದಾರೆ.


ಮೆಡಿಕಲ್ ಶಾಪ್ ಒಂದರಲ್ಲಿ ಉದ್ಯೋಗಿಯಾಗಿರುವ ಪ್ರಿಯಾ ಕೆ.ಆರ್ ಅವರಿಗೆ ಲೀಸ್ ಗೆ ಮನೆ ಕೊಡಿಸುವುದಾಗಿ ಹೇಳಿ ಕೆ.ಎಸ್.ರಾವ್ ರೋಡಿನ ಒಂದು ಅಪಾರ್ಟಮೆಂಟ್ ನ ಖಾಲಿ ಫ್ಲಾಟ್ ತೋರಿಸಿ ಎರಡು ವರ್ಷಗಳ ಅವಧಿಗೆ ಲೀಸ್ ಕೊಡುವುದೆಂದು ಹೇಳಿ ಐದು ಲಕ್ಷ ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ಮಂಗಳೂರಿನಿoದ ತಪ್ಪಿಸಿಕೊಂಡಿದ್ದು, ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಬೆಳಗಾವಿ ಮುಂತಾದ ಕಡೆಗಳಲ್ಲಿ ಓಡಾಡಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.


ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನ, ಎಸಿಪಿ ಪಿ.ಎ ಹೆಗಡೆ ಅವರ ಮಾರ್ಗದರ್ಶನ ಹಾಗೂ ಪಿ.ರಾಘವೇಂದ್ರ ಬೈಂದೂರು ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗುರಪ್ಪ ಕಾಂತಿ, ಕಾನ್ಸ್ಟೇಬಲ್ ಗಳಾದ ಮಾದೇವ ಮಾಂಗ್ ಮತ್ತು ಈಶ ಪ್ರಸಾದ್ ಅವರು ಪಾಲ್ಗೊಂಡಿದ್ದರು.

- Advertisement -

Latest News

error: Content is protected !!