Saturday, June 13, 2026
Homeಕರಾವಳಿಉಡುಪಿಹೆಬ್ರಿ: ಯಕ್ಷಗಾನದ ವೇಷದಾರಿಯೊಬ್ಬರ ಮೈ ಮೇಲೆ ದೈವದ ಆವೇಷ

ಹೆಬ್ರಿ: ಯಕ್ಷಗಾನದ ವೇಷದಾರಿಯೊಬ್ಬರ ಮೈ ಮೇಲೆ ದೈವದ ಆವೇಷ

- Advertisement -
- Advertisement -

ಹೆಬ್ರಿ: ಯಕ್ಷಗಾನದ ವೇಷದಾರಿಯೊಬ್ಬರ ಮೈ ಮೇಲೆ ದೈವದ ಆವೇಷವಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.

ಮಡಮಕ್ಕಿ ಮೇಳದವರಿಂದ “ಶ್ರೀ ಕ್ಷೇತ್ರ ಮಡಮಕ್ಕಿ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಮೇಳದ ಕಲಾವಿದ ಶ್ರೀ ವೀರಭದ್ರ ಸ್ವಾಮಿ ಎಂಬುವವರು ಕೋಟೆರಾಯಮ ದೈವದ ವೇಷ ಧರಿಸಿ ರಂಗಸ್ಥಳ ಪ್ರವೇಶ ಆಗುತ್ತಿದ್ದಂತೆ, ದೈವದ ಆವೇಶವಾಗಿದೆ.

ಹತ್ತು ನಿಮಿಷವರೆಗೆ ಪ್ರೇಕ್ಷಕರು ಪಾತ್ರದಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಕೊನೆಗೆ ಚೌಕಿಯಿಂದ ದೇವರ ತೀರ್ಥ ತಂದು ಪ್ರೊಕ್ಷಣೆ ಮಾಡಿದಾಗ ಕಲಾವಿದ ಮೊದಲ ಸ್ಥಿತಿಗೆ ಬಂದಿದ್ದಾರೆ.

- Advertisement -

Latest News

error: Content is protected !!