Saturday, June 13, 2026
Homeಕರಾವಳಿಉಡುಪಿಉಡುಪಿ: ಕಾಲೇಜಿನಲ್ಲಿ ನಿಲ್ಲದ ಹಿಜಾಬ್ ವಿವಾದ - ನಮಗೆ ಆನ್‌ಲೈನ್ ಕ್ಲಾಸ್ ಬೇಡ, ಎಲ್ಲರೊಂದಿಗೆ ಕುಳಿತು...

ಉಡುಪಿ: ಕಾಲೇಜಿನಲ್ಲಿ ನಿಲ್ಲದ ಹಿಜಾಬ್ ವಿವಾದ – ನಮಗೆ ಆನ್‌ಲೈನ್ ಕ್ಲಾಸ್ ಬೇಡ, ಎಲ್ಲರೊಂದಿಗೆ ಕುಳಿತು ನಮಗೆ ಪಾಠ ಕೇಳಬೇಕು

- Advertisement -
- Advertisement -

ಉಡುಪಿ: ಮಹಿಳಾ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಮಗೆ ಆನ್‌ಲೈನ್ ಕ್ಲಾಸ್ ಬೇಡ, ಎಲ್ಲರೊಂದಿಗೆ ಕುಳಿತು ನಮಗೆ ಪಾಠ ಕೇಳಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಬಗ್ಗೆ ಇಂದು ಮತ್ತೆ ಮಾಧ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು, ನಮಗೆ 6 ಮಂದಿಗೆ ಮಾತ್ರ ಏಕೆ ಆನ್‌ಲೈನ್ ಕ್ಲಾಸ್. ಆನ್‌ಲೈನ್ ಕ್ಲಾಸ್ ಆದರೆ ಪ್ರಾಕ್ಟಿಕಲ್ ಕ್ಲಾಸ್ ಹೇಗೆ ಮಾಡುತ್ತಾರೆ. ನಮಗೆ ಆನ್‌ಲೈನ್ ಕ್ಲಾಸ್ ಬೇಡ. ನಮಗೆ ಆಫ್‌ಲೈನ್ ಕ್ಲಾಸ್ ಬೇಕು. ಇದು ಹೇಗೆ ಸಮಾನತೆಯಾಗುತ್ತದೆ. . ಈವರೆಗೆ ಲಾಬ್ ಅಟೆಂಡನ್ ಮಿಸ್ ಆಗಿದ ಎಲ್ಲರೊಂದಿಗೆ ನಮಗೆ ಕುಳಿತು ಪಾಠ ಕೇಳಬೇಕು ಎಂದು ಹೇಳಿದರು.

ನಮ್ಮ ಸೀನಿಯರ್ಸ್ ಹಿಜಾಬ್ ಹಾಕುತ್ತಿದ್ದರು. ನಾವು ಕಳೆದ ಡಿ.28ರಿಂದ ಹಿಜಾಬ್ ಹಾಕುತ್ತಿದ್ದೆವು. ಇದಕ್ಕೂ ಮುನ್ನ ಹಿಜಾಬ್ ಬಗ್ಗೆ ನಮ್ಮ ಪೋಷಕರು ಮಾತನಾಡಿದ್ದಾರೆ. ನಮಗೂ ಶಿಕ್ಷಣ ಮುಖ್ಯ ಅದರ ಜೊತೆಗೆ ಧರ್ಮ ಮತ ನಮ್ಮ ಹಿಜಬ್ ಹಕ್ಕು ಮುಖ್ಯ ಎಂದರು.

- Advertisement -

Latest News

error: Content is protected !!