Sunday, June 14, 2026
Homeಕರಾವಳಿಮಂಗಳೂರು: ಒಂದೇ ಮನೆಯ 48 ದನಗಳು ಕಳವು

ಮಂಗಳೂರು: ಒಂದೇ ಮನೆಯ 48 ದನಗಳು ಕಳವು

- Advertisement -
- Advertisement -

ಮಂಗಳೂರು: 18 ವರ್ಷಗಳಿಂದ ಹೈನುಗಾರಿಕೆಯೇ ಜೀವನಾಧಾರ ಮಾಡಿಕೊಂಡು ಬದುಕುತ್ತಿರುವ ಬೋಂದೆಲ್ ಚರ್ಚ್ ಬಳಿಯ ನಿವಾಸಿ ಲಾರೆನ್ಸ್ ಡಿಸಿಲ್ವಾ ಮತ್ತು ಸರಿತಾ ಡಿಸಿಲ್ವಾ ಅವರು ತಮ್ಮ ಸ್ವಂತ ಮಕ್ಕಳಂತೆ ಸಾಕುತ್ತಿದ್ದ 48 ದನಗಳನ್ನು ಕಳೆದುಕೊಂಡಿದ್ದಾರೆ.

ಲಾರೆನ್ಸ್ ಡಿ ಸಿಲ್ವಾ ಅವರ ಕುಟುಂಬ ಪ್ರತಿನಿತ್ಯ ನೂರಾರು ಲೀಟರ್ ಹಾಲನ್ನು ಮನೆಮನೆಗೆ ಹಾಗೂ ಡೈರಿಗೆ ಹಾಕಿ ಜೀವನ ಸಾಗಿಸುತ್ತಿದ್ದು, ಆ ಮನೆಯಿಂದ ಗೋ ಕಳ್ಳರು ಕಳೆದ 15 ವರ್ಷದಲ್ಲಿ ಕುಟುಂಬದ ಜೀವನಾಧಾರವಾಗಿದ್ದ ಬರೋಬ್ಬರಿ 48 ದನಗಳನ್ನು ಕಳವುಗೈದಿದ್ದಾರೆ.

ಜ. 23ರ ಘಟನೆಯ ಬಗ್ಗೆಯೂ ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇಂದಿಗೂ ಕೃತ್ಯವೆಸಗಿದವರ ಸುಳಿವೇ ಇಲ್ಲ. ಹೀಗೆಯೇ ದನಗಳನ್ನು ಕದಿಯುತ್ತಿದ್ದರೆ ದನಗಳನ್ನು ಸಾಕುವುದಾದರೂ ಹೇಗೆ ಎಂದು ಮನೆಯವರು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!