Sunday, June 29, 2025
Homeತಾಜಾ ಸುದ್ದಿಬೆಂಗಳೂರು: ಇಂದು ಸಂಜೆ ಆರು ಗಂಟೆಯಿಂದಲೇ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಜನ ಗುಂಪುಗೂಡುವುದು ನಿಷೇಧ...!

ಬೆಂಗಳೂರು: ಇಂದು ಸಂಜೆ ಆರು ಗಂಟೆಯಿಂದಲೇ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಜನ ಗುಂಪುಗೂಡುವುದು ನಿಷೇಧ…!

spot_img
- Advertisement -
- Advertisement -

ಬೆಂಗಳೂರು: ಬೆಂಗಳೂರಿನ ಹೃದಯ ಭಾಗ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಈ ಭಾರಿಯ ಹೊಸ ವರ್ಷಾಚರಣೆಯನ್ನು ಆಚರಿಸಲು ಅವಕಾಶ ಇರುವುದಿಲ್ಲ. ಸಂಜೆ ಆರು ಗಂಟೆಯಿಂದ ಜ.1ರ ಮುಂಜಾನೆ 6 ಗಂಟೆವರೆಗೆ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಹಾಗೂ ಸಮೀಪದ ರಸ್ತೆಗಳಲ್ಲಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ತಿಳಿಸಿದ್ದಾರೆ.

ಕಳೆದ ವರ್ಷವೂ ಕೂಡ ಕೊರೊನಾ ಹಿನ್ನೆಲೆ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಲಾಗಿತ್ತು. ಈ ವರ್ಷವೂ ಒಮಿಕ್ರಾನ್‌ ಹಿನ್ನೆಲೆ ಸಾಮೂಹಿಕವಾಗಿ ಹೊಸ ವರ್ಷಾಚರಣೆ ನಡೆಸದಂತೆ ಸರ್ಕಾರ ಆದೇಶಿಸಿದೆ.

ಆದರೆ, ಶುಕ್ರವಾರ ರಾತ್ರಿ 10 ಗಂಟೆವರೆಗೆ ಹೋಟೆಲ್‌, ಪಬ್‌, ಕ್ಲಬ್‌, ರೆಸ್ಟೋರೆಂಟ್‌ ಸೇರಿದಂತೆ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶವಿದೆ. ಬಳಿಕ ರಾತ್ರಿ 10ರ ಬಳಿಕ ಕರ್ಫ್ಯೂ ಜಾರಿಯಾಗಿರುವುದರಿಂದ ಈ ಎಲ್ಲ ಚಟುವಟಿಕೆಗಳು ಬಂದ್‌ ಆಗಲಿವೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳ ತಪಾಸಣೆ ಮಾಡಲಿದ್ದಾರೆ ಹಾಗೂ ಹೊಯ್ಸಳ, ಚೀತಾ ವಾಹನಗಳು ಗಸ್ತು ಮಾಡಿ, ಧ್ವನಿ ವರ್ಧಕಗಳ ಮೂಲಕ ಗುಂಪುಗೂಡದಂತೆ ಎಚ್ಚರಿಕೆ ನೀಡಲಿದ್ದಾರೆ.

- Advertisement -
spot_img

Latest News

error: Content is protected !!