ಬೆಳ್ತಂಗಡಿ: ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ದಕ್ಷಿಣ ಕನ್ನಡ ಹಾಗೂ ವಕೀಲರ ಸಂಘ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ನ್ಯಾಯಾಲಯ ಆವರಣದಲ್ಲಿ ಸುಮಾರು 2.10 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಭವನವನ್ನು ಇಂದು ದೇಶದ ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಸುಮಾರು 3 ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, ಜನತೆಗೆ ಶೀಘ್ರ ನ್ಯಾಯ ನೀಡುವುದು ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಕೆ. ಸೋಮಶೇಖರ್ ವಹಿಸಿದ್ದರು. ಘನ ಉಪಸ್ಥಿತರಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಝ್ ಮತ್ತು ಎಸ್.ವಿಶ್ವಜಿತ್ ಶೆಟ್ಟಿ ಶುಭ ಕೋರಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಿರಿಯ ವಕೀಲರು ಹಾಗೂ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪಸಿಂಹ ನಾಯಕ್, ಕರ್ನಾಟಕ ದಕ್ಷಿಣ-ಪಶ್ಚಿಮ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇ ಗೌಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಲ್. ಶ್ರೀನಿವಾಸ ಬಾಬು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮಾಜಿ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿ ನಿಯುಕ್ತಿಗೊಂಡಿರುವ ಪಿ.ಪಿ ಹೆಗ್ಡೆ, ಹೈಕೋರ್ಟ್ ರಿಜಿಸ್ಟ್ರಾರ್ ಶಿವಶಂಕರೇ ಗೌಡ, ಲೋಕೋಪಯೋಗಿ ಮುಖ್ಯ ಇಂಜಿನಿಯರ್ ಕಾಂತರಾಜ್ ಉಪಸ್ಥಿತರಿದ್ದರು.
ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ವಕೀಲರ ಸಂಘ ಉಪಾಧ್ಯಕ್ಷ ಗಣೇಶ್ ಗೌಡ, ಕೋಶಾಧಿಕಾರಿ ಪಿ.ಎನ್, ಜೊತೆ ಕಾರ್ಯದರ್ಶಿ ಪ್ರಿಯಾಂಕಾ ಕೆ, ಕ್ರೀಡಾ ಕಾರ್ಯದರ್ಶಿ ಧನಂಜಯ ಕುಮಾರ್ ಡಿ, ಸಾಂಸ್ಕೃತಿಕ ಕಾರ್ಯದರ್ಶಿ ಮಮ್ತಾಝ್ ಬೇಗಂ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಕುಮಾರ್ ಎಸ್.ಎಂ, ಶ್ರೀನಿವಾಸ ಗೌಡ, ಶಿವಯ್ಯ ಎಸ್.ಎಲ್, ಮನೋಹರ್ ಕುಮಾರ್ ಎ, ಆರ್ ಸುಭಾಷಿಣಿ, ಅಶೋಕ್ ಕರಿಯನೆಲ, ಹಿರಿಯ ಸಮಿತಿಯ ಸದಸ್ಯ ವೈ ಶ್ಯಾಮ್ ಭಟ್, ಸೇವಿಯರ್ ಪಾಲೇಲಿ ಇವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.



