Sunday, May 19, 2024
Homeಕರಾವಳಿಉಡುಪಿಗಂಗೊಳ್ಳಿ: ಅಕ್ರಮ ಗೋವು ಕಳವು ಮಾಡಿ ತಂದು ಗೋ ವಧೆಗೆ ಸಿದ್ಧತೆ, ಓರ್ವ ಬಂಧನ...

ಗಂಗೊಳ್ಳಿ: ಅಕ್ರಮ ಗೋವು ಕಳವು ಮಾಡಿ ತಂದು ಗೋ ವಧೆಗೆ ಸಿದ್ಧತೆ, ಓರ್ವ ಬಂಧನ !

spot_img
- Advertisement -
- Advertisement -

ಗಂಗೊಳ್ಳಿ: ಗುಜ್ಜಾಡಿಯ ಮಂಕಿ ಕ್ರಾಸ್ ಬಳಿ ಅಕ್ರಮ ಗೋ ವಶಕ್ಕೆ ಪಡೆದುಕೊಂಡ ಘಟನೆ ನಡಿದೆ. ಪೊಲೀಸರು ವಶಕ್ಕೆ ಪಡೆದ ವ್ಯಕ್ತಿ ಮೊಹಮ್ಮದ್ ಇಬ್ರಾಹಿಂ ಬಬ್ಬ ( 41 ). ಈತ ವಧೆಗೆ ಯತ್ನಿಸುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ ನಂಜಾ ನಾಯ್ಕ ಎನ್ ಅವರು ಇತರ ಸಿಬ್ಬಂದಿ ಗಳೊಂದಿಗೆ ಕುಂದಾಪುರದ ಗುಜ್ಜಾಡಿಯ ಮಂಕಿ ಕ್ರಾಸ್ ಬಳಿ ತೆರಳಿ ನೋಡಿದಾಗ ಸ್ಥಳದಲ್ಲಿ ಜಾನುವಾರು ವಧೆಗೆ ಸಿದ್ಧತೆ ನಡೆಸುತ್ತಿರುವುದು ಕಂಡು ಬಂದಿದೆ .

2000 ರೂ . ಮೌಲ್ಯದ ಒಂದು ಜಾನುವಾರು ಹಾಗೂ ಜಾನುವಾರು ವಧೆಗೆ ಬಳಸುವ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಓರ್ವ ಪರಾರಿಯಾಗಿದ್ದು , ಮೊಹಮ್ಮದ್ ಇಬ್ರಾಹಿಂ ಯಾನೆ ಬಬ್ಬ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಆಪಾದಿತನು ಮಾಂಸ ಮಾಡುವ ಉದ್ದೇಶದಿಂದ ಬೀಡಾಡಿ ದನವನ್ನು ಕಳವು ಮಾಡಿ ತಂದು ಗೋ ವಧೆಗೆ ಸಿದ್ಧತೆ ನಡೆಸುತ್ತಿದ್ದ ಎಂಬುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!