Thursday, June 4, 2026
Homeಇತರ777 ಚಾರ್ಲಿ ಸದ್ಯಕ್ಕೆ ಬಿಡುಗಡೆಯಾಗಿತ್ತಿಲ್ಲ ಎಂದು ಟ್ವಿಟ್ ಮಾಡಿದ ರಕ್ಷಿತ್ ಶೆಟ್ಟಿ

777 ಚಾರ್ಲಿ ಸದ್ಯಕ್ಕೆ ಬಿಡುಗಡೆಯಾಗಿತ್ತಿಲ್ಲ ಎಂದು ಟ್ವಿಟ್ ಮಾಡಿದ ರಕ್ಷಿತ್ ಶೆಟ್ಟಿ

- Advertisement -
- Advertisement -

ರಕ್ಷಿತ್‌ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಸಿನೆಮಾ “777 ಚಾರ್ಲಿ’ ಡಿಸೆಂಬರ್‌ 31ರಂದು ಬಿಡುಗಡೆಯಾಗ ಬೇಕಿತ್ತು. ಈ ಬಗ್ಗೆ ಸ್ವತಃ ಚಿತ್ರತಂಡವೇ ಘೋಷಿಸಿತ್ತು. ಆದರೆ, ಈಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ವಿಷಯವನ್ನು ಚಿತ್ರತಂಡ ಈಗ ಅಧಿಕೃತವಾಗಿ ಹೇಳಿಕೊಂಡಿದೆ. “ನಮ್ಮ ಚಿತ್ರ ಡಿ.31ರಂದು ಬಿಡುಗಡೆಯಾಗುತ್ತಿಲ್ಲ.

ಕೆಲವು ವಿಳಂಬಗಳು ಹೊಸ ಅಧ್ಯಾಯಕ್ಕೆ ನಾಂದಿಯಾಗುತ್ತವೆ’ ಎಂದಿದೆ. ಎಲ್ಲಾ ಓಕೆ, ಬಿಡುಗಡೆ ಮುಂದಕ್ಕೆ ಯಾಕೆ ಎಂದು ಕೇಳಬಹುದು. ಗಾಂಧಿನಗರದ ಮೂಲಗಳ ಪ್ರಕಾರ, ಚಿತ್ರದ ಹಿಂದಿ ವರ್ಶನ್‌ ಬಿಡುಗಡೆಗೆ ಮುಂಬೈನ ಪ್ರತಿಷ್ಠಿತ ಸಂಸ್ಥೆಯೊಂದು ಮುಂದೆ ಬಂದಿದ್ದು, ಎಲ್ಲಾ ಭಾಷೆಗೂ ಹೊಂದಿಕೆಯಾಗುವ ದಿನಾಂಕದಲ್ಲಿ ಬಿಡುಗಡೆ ಮಾಡಲು ಯೋಚಿಸಲಾಗಿದ್ದು, ಆ ಕಾರಣದಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ ಎಂದು ಚಿತ್ರತಂಡ ತಿಳಿಸಿದೆ.

- Advertisement -

Latest News

error: Content is protected !!