Friday, June 5, 2026
Homeಕರಾವಳಿಅದ್ಧೂರಿಯಾಗಿ ನೆರವೇರಿತು ಶ್ರೀ ಕ್ಷೇತ್ರ ಕಾರಿಂಜ ದೀಪೋತ್ಸವ

ಅದ್ಧೂರಿಯಾಗಿ ನೆರವೇರಿತು ಶ್ರೀ ಕ್ಷೇತ್ರ ಕಾರಿಂಜ ದೀಪೋತ್ಸವ

- Advertisement -
- Advertisement -

ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜದಲ್ಲಿ ದೀಪೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು. ದೇವಾಲಯ ಪೂರ್ತಿ ಸಾವಿರಾರು ದೀಪದಿಂದ ಪ್ರಜ್ವಲಿತವಾಗಿ ಇತಿಹಾಸ ಸೃಷ್ಟಿಸಿತು. ಸಹಸ್ರಾರು ಜನರು ಸೇರಿದ್ದರು.

ರಥಬೀದಿಯಿಂದ ಶಿವಸನ್ನಿಧಿಯವರೆಗಿನ ಹಾದಿಯು ಹಣತೆಯ ದೀಪದಿಂದ ಊರಿಗೆ ಊರೇ ಬೆಳಗಿರುವಂತೆ ಖಂಡಿತು. ಶಿವಸನ್ನಿಧಿಯಲ್ಲಿ ತುಲಾಭಾರ ಹಾಗೂ ರಂಗಪೂಜೆ ನಡೆದು ಅದಾದ ಬಳಿಕ ಈಶ್ವರ ದೇವರು ಪಾರ್ವತಿ ಸನ್ನಿಧಾನಕ್ಕೆ ಬಂದು ಬಲಿ ಉತ್ಸವ, ಅಲ್ಲಿಂದ ರಥಬೀದಿಗೆ ಬಂದು ಪೂಜೆ ಜರಗಿತು.

ಬಲ್ಲೋಡಿ ಮಾಗಣೆಯಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ, ಪಾರ್ವತಿ ಸನ್ನಿಧಿಯ ಎದುರು ಭಾಗದಲ್ಲಿ ನೇಮೊತ್ಸವ ನಡೆಯಿತು. ಯಕ್ಷವ್ಯಾಸಂ ಕಾರಿಂಜ ಇದರ ಸಹಯೋಗದಲ್ಲಿ ಪಾರ್ವತಿ ಸನ್ನಿಧಿಯಲ್ಲಿ “ಸಾಯುಜ್ಯ ಸಂಗ್ರಾಮ” ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

- Advertisement -

Latest News

error: Content is protected !!