Saturday, June 13, 2026
Homeಅಪರಾಧಮಂಗಳೂರು: ಪೂಜೆಗೆ ಇಟ್ಟ ಕರಿಮಣಿ ಸರವನ್ನು ಹಿಂದಿರುಗಿಸದೆ ಮಹಿಳೆಗೆ ವಂಚನೆ- ಜ್ಯೋತಿಷಿ ವಿರುದ್ಧ ದೂರು ದಾಖಲು..!

ಮಂಗಳೂರು: ಪೂಜೆಗೆ ಇಟ್ಟ ಕರಿಮಣಿ ಸರವನ್ನು ಹಿಂದಿರುಗಿಸದೆ ಮಹಿಳೆಗೆ ವಂಚನೆ- ಜ್ಯೋತಿಷಿ ವಿರುದ್ಧ ದೂರು ದಾಖಲು..!

- Advertisement -
- Advertisement -

ಮಂಗಳೂರು: ಪೂಜೆಯಲ್ಲಿ ಕಲಶಕ್ಕೆ ಇಟ್ಟ ಕರಿಮಣಿ ಸರವನ್ನು ಹಿಂದಿರುಗಿಸದೆ ಜ್ಯೋತಿಷಿಯೋರ್ವ ಮಹಿಳೆಗೆ ವಂಚಿಸಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೋರ್ವರು ತನ್ನ ಮನೆ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಅ.13 ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಬಳಿ ಹೋಗಿದ್ದರು. ದೋಷವನ್ನು ಕಳೆಯುವುದಕ್ಕಾಗಿ ಪೂಜೆ ಮಾಡಿಸಿಕೊಡುತ್ತೇನೆ. ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣ ತರಬೇಕು ಎಂದಿದ್ದ. ಅದರಂತೆಯೇ ಮಹಿಳೆ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಪೂಜೆಗೆ ನೀಡಿದ್ದರು. ವಿನೋದ್ ಆ ಸರವನ್ನಿಟ್ಟು 15 ದಿನ ಪೂಜೆ ಮಾಡಿ ವಾಪಾಸ್ ನೀಡುವುದಾಗಿ ತಿಳಿಸಿದ್ದ.

ಆದರೆ ಪೂಜೆ ನಡೆದು ಹದಿನೈದು ದಿನ ಕಳೆದರು ಚಿನ್ನದ ಕರಿಮಣಿ ಸರವನ್ನು ವಾಪಸ್ ನೀಡದೆ ತಲೆಮಾರಿಸಿಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!