Saturday, June 6, 2026
Homeಕರಾವಳಿಉಡುಪಿಕಾರ್ಕಳ: ಮನೆಯಲ್ಲಿಯೇ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್ ಸಿಬ್ಬಂದಿ !

ಕಾರ್ಕಳ: ಮನೆಯಲ್ಲಿಯೇ ಹೆರಿಗೆ ಮಾಡಿಸಿದ 108 ಆಂಬುಲೆನ್ಸ್ ಸಿಬ್ಬಂದಿ !

- Advertisement -
- Advertisement -

ಕಾರ್ಕಳ: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯೋರ್ವಳಿಗೆ ಆಂಬುಲೆನ್ಸ್ ಸಿಬ್ಬಂದಿ ಮನೆಯಲ್ಲಿಯೇ ಹೆರಿಗೆ ಮಾಡಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.ನಿಟ್ಟೆ ಗ್ರಾಮದ ಗೀತಾ ಎಂಬುವವರಿಗೆ ಹೆರಿಗೆ ನೋವು ತೀವ್ರವಾಗಿ ಕಾಣಿಸಿಕೊಂಡಿತ್ತು. ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಇವರ ಮನೆಯಿಂದ ಹೆದ್ದಾರಿಗೆ ಸುಮಾರು ಒಂದು ಕಿಲೋಮೀಟರ್ ಅಂತರವಿರುವುದರಿಂದ ಆಂಬುಲೆನ್ಸ್ ಇವರ ಮನೆಗೆ ಬರಲಾಗದೆ ಸಿಬ್ಬಂದಿ ಮನೆಗೆ ಧಾವಿಸಿದ್ದಾರೆ.ಅದಾಗಲೇ ಇವರಿಗೆ ಹೊಟ್ಟೆನೋವು ತೀವ್ರವಾದ ಕಾರಣ ಮನೆಯಲ್ಲಿಯೇ ಹೆರಿಗೆ ಮಾಡಲಾಗಿದೆ.

ರಾಧಾಮಣಿ ಜಿ.ಕೆ ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿಯಾಗಿದ್ದಾರೆ. ಗೀತಾರವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಸುರಕ್ಷಿತವಾಗಿದ್ದಾರೆ.

- Advertisement -

Latest News

error: Content is protected !!