Saturday, June 6, 2026
Homeಅಪರಾಧಮಂಗಳೂರು: ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು...! ಪೊಲೀಸ್ ಆಯುಕ್ತರಿಗೆ 8 ವರ್ಷದ ಬಾಲಕಿಯಿಂದ ಮನವಿ...!

ಮಂಗಳೂರು: ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು…! ಪೊಲೀಸ್ ಆಯುಕ್ತರಿಗೆ 8 ವರ್ಷದ ಬಾಲಕಿಯಿಂದ ಮನವಿ…!

- Advertisement -
- Advertisement -

ಮಂಗಳೂರು: ಉಳಾಯಿಬೆಟ್ಟುವಿನಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿಗೆ 8 ವರ್ಷದ ಬಾಲಕಿಯೊಬ್ಬಳು ಇಂದು (ನವೆಂಬರ್ 25) ಮನವಿ ಪತ್ರ ಸಲ್ಲಿಸಿದ್ದಾಳೆ.

ಕುಳಾಯಿ ಮೂಲದ 4ನೇ ತರಗತಿಯಲ್ಲಿ ಓದುತ್ತಿರುವ ಚಾರ್ವಿ ನಿರಂಜನ್ ಪೊಲೀಸ್ ಆಯುಕ್ತರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದು, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾಳೆ.

ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಶಿಕುಮಾರ್ ಅವರು ಚಾರ್ವಿಗೆ ಭರವಸೆ ನೀಡಿದರು.

- Advertisement -

Latest News

error: Content is protected !!