Sunday, June 7, 2026
Homeಕರಾವಳಿಕಾಸರಗೋಡುಕಾಸರಗೋಡು: ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಬಡಿದು ವ್ಯಕ್ತಿ ಸಾವು...!

ಕಾಸರಗೋಡು: ರೈಲು ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಬಡಿದು ವ್ಯಕ್ತಿ ಸಾವು…!

- Advertisement -
- Advertisement -

ಕಾಸರಗೋಡು: ಮೊಬೈಲ್ ನಲ್ಲಿ ಮಾತನಾಡುತ್ತಾ ರೈಲು ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರಿಗೆ ರೈಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ಬೇಕಲ ಸಮೀಪದ ಚೇಟುಕುಂಡು ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಪೆರಿಯ ಕಾಯಕುಲದ ಶರಣ್ (26) ಕೆಎಸ್‌‌ಇಬಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಚಿತ್ತಾರಿ ವಿದ್ಯುತ್ ಕಚೇರಿಯ ಮೀಟರ್ ರೀಡರ್ ನೌಕರ ರಾಗಿದ್ದರು. ಇಂದು ಮಧ್ಯಾಹ್ನ ಕರ್ತವ್ಯ ಕ್ಕೆ ತೆರಳುತ್ತಿದ್ದಾಗ ರೈಲು ಬಡಿದು ಈ ದುರ್ಘಟನೆ ನಡೆದಿದೆ.

ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಶರಣ್ ಸ್ಥಳ ದಲ್ಲೇ ಮೃತಪಟ್ಟಿದ್ದು, ಬೇಕಲ ಪೊಲೀಸರು ಮಹಜರು ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Latest News

error: Content is protected !!