Thursday, June 4, 2026
HomeUncategorizedಉಡುಪಿ: ಸಿಟಿ ಬಸ್ ಸ್ಟ್ಯಾಂಡ್ ಬಳಿ ಗುಜರಿ ಗೋದಾಮಿಗೆ ಆಕಸ್ಮಿಕ ಬೆಂಕಿ !

ಉಡುಪಿ: ಸಿಟಿ ಬಸ್ ಸ್ಟ್ಯಾಂಡ್ ಬಳಿ ಗುಜರಿ ಗೋದಾಮಿಗೆ ಆಕಸ್ಮಿಕ ಬೆಂಕಿ !

- Advertisement -
- Advertisement -

ಉಡುಪಿ: ಉಡುಪಿಯ ಸಿಟಿ ಬಸ್‌ ಸ್ಟ್ಯಾಂಡ್‌ ಸಮೀಪದಲ್ಲಿ ಇದ್ದ ಗುಜುರಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹಳೆಯ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ.

ಶುಕ್ರವಾರ ಘಟನೆ ನಡೆದಿದ್ದು, ಈ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಆದ ನಷ್ಟದ ಕುರಿತು ಇನ್ನೂ ತಿಳಿಯಬೇಕಾಗಿದೆ. ಆದ ನಷ್ಟದ ಕುರಿತು ನಿಖರ ಮಾಹಿತಿ ಇನ್ನೂ ದೊರಕಿಲ್ಲ.

ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಸ್ಥಳದಲ್ಲಿದ್ದ ಹಳೆಯ ಟಯರ್, ಸೀಟು ಕವರ್ ಸೇರಿದಂತೆ ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದಾರೆ.

- Advertisement -

Latest News

error: Content is protected !!