Thursday, June 4, 2026
Homeಕರಾವಳಿಮಂಗಳೂರು: ಗಾಂಜಾ ಸೇವನೆ 6 ಜನರ ಬಂಧನ !

ಮಂಗಳೂರು: ಗಾಂಜಾ ಸೇವನೆ 6 ಜನರ ಬಂಧನ !

- Advertisement -
- Advertisement -

ಗಾಂಜಾ ಸೇವಿಸಿದ ಎರಡು ಬೇರೆ ಬೇರೆ ಪ್ರಕರಣದಲ್ಲಿ ಒಟ್ಟು 6 ಜನರನ್ನು ಮಂಗಳೂರು ನಗರದ ಉರ್ವ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಗರದ ಬಿಜೈ ಕಾಪಿಕಾಡ್ ನಲ್ಲಿ ಐವರು ಸೇರಿ ಸಿಗರೇಟನ್ನು ಸೇದುತ್ತಾ ಇದ್ದದ್ದನ್ನು ಕಂಡು ಪೊಲೀಸರು ವಿಚಾರಿಸಿದಾಗ ಅವರು ಅಸ್ಪಷ್ಟವಾಗಿ ತೊದಲು ನುಡಿಯಲ್ಲಿ ಉತ್ತರವನ್ನು ನೀಡಿದ್ದು, ಅವರು ಮಾತನಾಡುವಾಗ ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿತ್ತು.

ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ ನಗರದ ಖಾಸಗಿ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳೆಂದು ತಿಳಿದಿದ್ದು,ಬಂಧಿತರನ್ನು ರುತಿನ್, ಆಕಾಶ್. ಕೆ, ಅಕ್ಷಯ್, ಮಾರ್ಟಿನ್, ಹರಿಕೃಷ್ಣನ್ ಕೆ. ಹಾಗೂ ಮತ್ತೊಂದು ಪ್ರಕರಣದಲ್ಲಿ ವಸಂತ ಕುಮಾರ್ ಎಂದು ಗುರುತಿಸಲಾಗಿದೆ.

ಅವರು ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡರು. ಅವರನ್ನು ವಶಕ್ಕೆ ಪಡೆದುಕೊಂಡು ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದೆ. ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

- Advertisement -

Latest News

error: Content is protected !!