Sunday, June 7, 2026
Homeಅಪರಾಧಕಾಸರಗೋಡು: ವೀಸಾ ನೀಡುವುದಾಗಿ ವ್ಯಕ್ತಿ ಓರ್ವನಿಗೆ ವಂಚನೆ !

ಕಾಸರಗೋಡು: ವೀಸಾ ನೀಡುವುದಾಗಿ ವ್ಯಕ್ತಿ ಓರ್ವನಿಗೆ ವಂಚನೆ !

- Advertisement -
- Advertisement -

ಕಾಸರಗೋಡು: ಹೈದರಾಬಾದ್ ಮೂಲದ ವ್ಯಕ್ತಿ ಓರ್ವ, ಒಬ್ಬರಿಗೆ ವೀಸಾ ನೀಡುವುದಾಗಿ ಭರವಸೆ ನೀಡಿ ಅವರಿಂದ 3.30 ಲಕ್ಷ ರೂ. ಪಡೆದು ವಂಚನೆ ನಡೆಸಿದ್ದಾನೆ. ಈತನನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹೈದರಾಬಾದ್ ನ ಮಜೀಶ್ ಮನೋಹರ್(35) ಎಂದು ಗುರುತಿಸಲಾಗಿದೆ. ಈತ ನೀರ್ಚಾಲ್ ನ ರವೀಂದ್ರ ನಾಯ್ಕ್ ಎಂಬವರಿಂದ ಹಣ ಪಡೆದಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಈಗಾಗಲೇ ಬಂಧಿಸಲಾಗಿದೆ.

ಇವನು 2019 ರ ರವೀಂದ್ರ ನಾಯ್ಕ್ ರಿಂದ ಹಣ ಪಡೆದಿದ್ದ. ಸಂಬಂಧಿಕರೋರ್ವರ ಮೂಲಕ ಮನೀಶ್ ನ ಪರಿಚಯ ವಾಗಿತ್ತು, ಬಳಿಕ ಕೆನಡಾಕ್ಕೆ ವೀಸಾ ನೀಡುವುದಾಗಿ ಹಣ ನೀಡಿದ್ದು, ಆದರೆ ವರ್ಷ ಕಳೆದರೂ ವೀಸಾ ನೀಡಲಿಲ್ಲ. ಇದರಿಂದ ಮಜೀಶ್ ತಲೆ ಮರೆಸಿಕೊಂಡಿದ್ದ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ. ಮಾತ್ರವಲ್ಲದೆ ಈತ ಕಾಸರಗೋಡು ಜಿಲ್ಲೆಯಿಂದ ಹಲವರಿಗೆ ವಂಚನೆ ನಡೆಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

- Advertisement -

Latest News

error: Content is protected !!